ಬೆಂಗಳೂರು: ಸಿದ್ದರಾಮಯ್ಯ ಸರಕಾರ ಬಜೆಟ್ ಮಂಡನೆ ಮಾಡುತ್ತಿದ್ದರೆ ಇತ್ತ ಕರ್ನಾಟಕ ಕಾಂಗ್ರೆಸ್ ವಿರೋದ ಪಕ್ಷಕ್ಕೆ ಚಾಟಿ ಬಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ. ಅವರು ತಮ್ಮ ಟ್ವೀಟ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಿ, ಗ್ಯಾರಂಟಿಗಳು ಜಾರಿಯಾಗಿ, ಅಧಿವೇಶನ ಶುರುವಾಗಿದೆ, ಬಜೆಟ್ ಮಂಡನೆಯೂ ಆರಂಭವಾಗಿದೆ. “ವಿರೋಧ ಪಕ್ಷದ ನಾಯಕ“ನ ಕುರ್ಚಿ ಮಾತ್ರ ಇನ್ನೂ ಖಾಲಿ ಇದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ನುಡಿಯುತ್ತಿದೆ. ಬಿಜೆಪಿ ವಿಪಕ್ಷ ನಾಯಕನ ಹುದ್ದೆಯನ್ನು ವ್ಯಾಪಾರಕ್ಕೆ ಇಟ್ಟಿರುವ ಅನುಮಾನವಿದೆ! ವ್ಯವಹಾರ ಇನ್ನೂ ಕುದುರಲಿಲ್ಲವೇ ಎಂದು ಪ್ರಶ್ನಿಸಿದೆ