ವಿದ್ಯುತ್ ಹರಿದು ಲೈನ್‌ಮನ್ ಸಾವು: ಪ್ರತಿಭಟನೆ

0
25

ರಾಯಚೂರು(ಅರಕೇರಾ): ವಿದ್ಯುತ್ ಸಮಸ್ಯೆ ಪರಿಹರಿಸಲು ವಿದ್ಯುತ್ ಕಂಬ ಹತ್ತಿ ಕಾರ್ಯನಿರ್ವಹಿಸುತ್ತಿರುವಾಗ ವಿದ್ಯುತ್ ಹರಿದು ಲೈನ್‌ಮೆನ್ ಸಾವನ್ನಪ್ಪಿದ ಘಟನೆ ಭಾನುವಾರ ಆಲದಮರ ತಾಂಡದಲ್ಲಿ ಘಟನೆ ನಡೆದಿದೆ.
ಮೃತಪಟ್ಟ ಲೈನ್‌ಮೆನ್ ವಿರುಪಾಕ್ಷಿ(30) ಎಂದು ಗುರುತಿಸಲಾಗಿದೆ. ಸಿರವಾರ ತಾಲ್ಲೂಕಿನ ಕವಿತಾಳ ಗ್ರಾಮದ ಮೂಲದವರಾಗಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಎದುರಾದಾಗ ಸರಿಪಡಿಸಲು ಲೈನ್‌ಮೆನ್ ವಿರುಪಾಕ್ಷಿ ಅವರು ವಿದ್ಯುತ್ ಕಂಬವನ್ನು ಹತ್ತಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಹರಿದು ಪರಿಣಾಮ ಕಂಬದ ಮೇಲೆರುವಾಗಲೇ ಮೃತಪಟ್ಟಿದ್ದಾರೆ.
ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸಿರವಾರ-ದೇವದುರ್ಗ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ವಾಹನಗಳ ಸಂಚಾರಕ್ಕೂ ಜನರು ಅವಕಾಶ ಮಾಡಿಕೊಟ್ಟಿಲ್ಲ. ರಸ್ತೆ ಮೇಲೆ ಟೈರ್‌ಗೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶಾಸಕರ ಬರುವಂತೆ ಪ್ರತಿಭಟನಾಕಾರರ ಒತ್ತಾಯಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜೆಸ್ಕಾಂ ಕಿರಿಯ ಎಂಜನಿಯರ್ ನಜೀರ್ ಸಾಬ್ ಎಂಬುವವರ ಮೇಲೆ ಆಕ್ರೋಶಗೊಂಡ ಜನರು ಹೊಡೆದಿದ್ದಾರೆ.
ಜೆಸ್ಕಾಂ ಸಹಾಯಕ ಎಂಜನಿಯರ್ ಜೆಇಇ ಕಳಕಪ್ಪ ಅವರು ಸಾರ್ವಜನಿಕರನ್ನು ಹಾಗೂ ಮೃತನ ಕುಟುಂಬದವರನ್ನು ಮನವೊಲಿಕೆಗೆ ಮುಂದಾಗಿದ್ದರು. ಸಂಚಾರ ಅವಕಾಶ ಕಲ್ಪಸಲಾಯಿತು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Previous articleಅಕ್ಕ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Next articleರೈಲು ದುರಂತ: ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು