ವರ್ಷದೊಳಗೆ ರಾಜ್ಯಕ್ಕೆ ಮಹದಾಯಿ ನೀರು: ಜೋಶಿ

0
44
Prahlad Joshi

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಒಂದು ವರ್ಷದೊಳಗೆ ಮಹಾದಾಯಿ ನೀರು ಪಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರಿಗೆ ಮಹದಾಯಿ ನೀರು ಬೇಕು. ನೀರು ಬರಲಿದೆ. ಮಹದಾಯಿ ನೀರು ತರುವ ಸ್ವರೂಪದ ಕುರಿತ ಚರ್ಚೆ ಅಪ್ರಸ್ತುತ. ನೀರಿಗಾಗಿ ಕಾಯುತ್ತಿರುವ ಜನ ಸ್ವರೂಪ ತೆಗೆದುಕೊಂಡು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಸ್ವರೂಪದ ಬಗ್ಗೆ ಪ್ರಶ್ನೆ ಮಾಡುತ್ತಿರುವವರು ನಿಜವಾದ ರೈತರೂ ಅಲ್ಲ. ಸಾರ್ವಜನಿಕರೂ ಅಲ್ಲ. ಬದಲಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸಗೇಡಿಗಳು ಮಾಡುತ್ತಿರುವ ಪ್ರಶ್ನೆಯಾಗಿದೆ. ಇಂಥದ್ದಕ್ಕೆ ರೈತರು, ಜನರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಮಹದಾಯಿ ನೀರು ರಾಜ್ಯಕ್ಕೆ ತರುವ ದಿಶೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನೂತನ ತಂತ್ರಜ್ಞಾನ ಬಳಸಿಕೊಂಡು ಅರಣ್ಯವನ್ನೂ ಉಳಿಸಿಕೊಂಡು ಕಾಮಗಾರಿ ನಡೆಸಲು ಚಿಂತನೆ ಮಾಡಿ ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತಿದ್ದಾರೆ. ಈಗ ನಡೆಯುತ್ತಿರುವ ಪ್ರಯತ್ನ ನೋಡಿದರೆ ನನಗನಿಸುತ್ತದೆ ಒಂದು ವರ್ಷದೊಳಗೆ ನೀರು ರಾಜ್ಯಕ್ಕೆ ಬರುತ್ತದೆ ಎಂದರು.

Previous articleಆನಂದ ಮಾಮನಿ ರೈತರ ನೈಜ ಪ್ರತಿನಿಧಿ
Next articleತುಷ್ಟೀಕರಣ ರಾಜಕಾರಣ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್ ಆರೋಪ