Home ತಾಜಾ ಸುದ್ದಿ ಯಾರೂ ಲಿಮಿಟ್ ಮೀರಿ ಹೋಗ್ಬಾರ‍್ದು: ಸತೀಶ ಖಡಕ್ ಎಚ್ಚರಿಕೆ

ಯಾರೂ ಲಿಮಿಟ್ ಮೀರಿ ಹೋಗ್ಬಾರ‍್ದು: ಸತೀಶ ಖಡಕ್ ಎಚ್ಚರಿಕೆ

0
satish

ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಡಿ.ಕೆ. ಶಿವಕುಮಾರ್ ಇಬ್ಬರು ಯಾವುದೇ ವಿಚಾರದಲ್ಲಿ ಲಿಮಿಟ್ ಮೀರಿ ಹೋಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಕದನ ವಿಚಾರವಾಗಿ ಮಾತನಾಡಿದ ಅವರು, ಯಾರೂ ಕೂಡ ವೈಯಕ್ತಿಕ ಟೀಕೆ ಮಾಡಬಾರದು. ರಮೇಶ್ ಇರಬಹುದು, ಡಿಕೆಶಿ ಇರಬಹುದು ಯಾರೇ ಆಗಲಿ. ಒಂದು ಲಿಮಿಟ್‌ನಲ್ಲಿ ಹೇಳಿಕೆ ನೀಡಿದರೆ ಒಳ್ಳೆಯದು. ಸಖಾ ಸುಮ್ಮನೆ ಮತನತನಕ್ಕೆ ಡ್ಯಾಮೇಜ್ ಮಾಡೋದು ಸರಿಯಲ್ಲ ಎಂದರು.
ಹೇಳಿಕೆ ನೀಡುವುದು ಆರೋಪ ಮಾಡುವುದು ದೊಡ್ಡದಲ್ಲ. ಆದರೆ, ಅದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ವೈಯಕ್ತಿಕವಾಗಿಯೂ ನಷ್ಟವಾಗುತ್ತದೆ. ಶಾಸಕ ರಮೇಶ್ ದೆಹಲಿ ಭೇಟಿ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ. ನಾನೂ ಮಾಧ್ಯಮಗಳ ಮೂಲಕ ರಮೇಶ್‌ಗೆ ಕಿವಿಮಾತು ಹೇಳುತ್ತೇನೆ. ಸಿಡಿ ವಿಷಯದಲ್ಲಿ ಯಾವುದೂ ಲಿಮಿಟ್ ಮೀರಿ ಹೋಗುವುದು ಬೇಡ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು. ಕಾನೂನು ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ಇದೆ ಎಂದು ತಿಳಿಸಿದರು.

Exit mobile version