Home ತಾಜಾ ಸುದ್ದಿ ಯಶಸ್ವಿ ಉಡಾವಣೆ: ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3

ಯಶಸ್ವಿ ಉಡಾವಣೆ: ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3

0

ಬೆಂಗಳೂರು: ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಭಾರತ ಬಹುನಿರೀಕ್ಷಿತ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯ (ISRO) ಶ್ರೀಹರಿಕೋಟಾದ ಸತೀಶ್ ದವನ್ ಸ್ಪೇಸ್ ಸೆಂಟರ್‌ ನಿಂದ ನಭಕ್ಕೆ ಚಿಮ್ಮಿದ ಚಂದ್ರಯಾನ ನೌಕೆಯು ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರುವಲ್ಲಿಯೂ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಶ್ರೀಹರಿಕೋಟಾದ ಕೇಂದ್ರದಲ್ಲಿ ವಿಜ್ಞಾನಿಗಳು, ತಂತ್ರಜ್ಞರ ಹರ್ಷ ಮುಗಿಲು ಮುಟ್ಟಿದೆ. ಆಗಸ್ಟ್ ಮೂರು ಇಲ್ಲವೇ ನಾಲ್ಕನೇ ವಾರ ಚಂದ್ರಯಾನ 3ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.

https://twitter.com/samyuktakarnat2/status/1679792345812746240

Exit mobile version