ಮೋದಿ ಸ್ಕೀಮ್ ಹೆಸರಿನಲ್ಲಿ ಸರ ಎಗರಿಸಿದ ಖದೀಮ

0
18

ಮಂಗಳೂರು: ಬ್ಯಾಂಕಿನ ಕಡೆಯಿಂದ ಹಣ ಡಬಲ್ ಮಾಡಿಕೊಡುವ ಮೋದಿ ಸ್ಕೀಮ್‌ನವರು ಎಂದು ಪರಿಚಯಿಸಿಕೊಂಡು ಮನೆಗೆ ಬಂದ ಅಪರಿಚಿತನೊಬ್ಬ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಕಡಬ ಠಾಣೆಯಲ್ಲಿ ನಡೆದಿದೆ.
ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಪುಳಿಮರಡ್ಕದ ಲಲಿತಾ ಸರ ಕಳೆದುಕೊಂಡ ಮಹಿಳೆ. ಬುಧವಾರ ಬೆಳಗ್ಗೆ ಲಲಿತಾ ಅವರು ಮನೆಯಿಂದ ಕಾಣಿಯೂರಿನತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಆಗಮಿಸಿದ ಅಪರಿಚಿತ, ಮಹಿಳೆ ಬಳಿ ಬೈಕ್ ನಿಲ್ಲಿಸಿ ಪರಿಚಿತನಂತೆ ಮಾತನಾಡಿಸಿದ್ದಾನೆ. ಬ್ಯಾಂಕಿನ ಕಡೆಯಿಂದ ಹಣ ಡಬಲ್ ಮಾಡುವ ಮೋದಿ ಸ್ಕೀಮ್‌ನವರು ನಾವು. ಮನೆಯಲ್ಲಿ ಮಾತನಾಡೋಣ ಬನ್ನಿ ಎಂದು ಹೇಳಿ ಅವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಮನೆ ತಲುಪಿದ ಬಳಿಕ 7 ಸಾವಿರ ರೂ. ಕೊಟ್ಟಲ್ಲಿ ಒಂದು ಲಕ್ಷ ರೂ. ಮರುಪಾವತಿಸುವುದಾಗಿ ಮಹಿಳೆಗೆ ಅಪರಿಚಿತ ತಿಳಿಸಿದ್ದಾನೆ. ತನ್ನಲ್ಲಿ ಹಣವಿಲ್ಲ ಎಂದಾಗ ಹಣದ ಬದಲು ಒಂದು ಪವನ್ ಚಿನ್ನ ಕೊಟ್ಟರೆ, ಬ್ಯಾಂಕ್‌ನಿಂದ ನಾಲ್ಕು ಪವನ್ ಚಿನ್ನ ಸಿಗುತ್ತದೆ ಎಂದು ನಂಬಿಸಿದ್ದ. ಅದರಂತೆ ಮಹಿಳೆ ತನ್ನಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನು ಅಪರಿಚಿತನ ಕೈಗೆ ಕೊಡಲು ಬಂದಿದ್ದು, ಈ ಸಂದರ್ಭ ತನಗೆ ಟೀ ಮಾಡಿಕೊಡುವಂತೆ ಆತ ಬೇಡಿಕೆ ಇಟ್ಟಿದ್ದಾನೆ. ಮಹಿಳೆ ಟೀ ಮಾಡಿಕೊಡಲೆಂದು ಚಿನ್ನದ ಸರವನ್ನು ಅಲ್ಲಿಯೇ ಮೇಜಿನ ಮೇಲೆ ಇರಿಸಿ ಅಡುಗೆ ಮನೆಗೆ ಹೋಗುವಷ್ಟರಲ್ಲಿ ಅಪರಿಚಿತ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾನೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous article25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಿ
Next articleಗಣೇಶ ಹಬ್ಬಕ್ಕೂ‌ ಮುನ್ನ ರಸ್ತೆ ರಿಪೇರಿಗೆ ಕ್ರಮ