ಚಾವಣಿಯಿಂದ ಬಿದ್ದು ಕಾರ್ಮಿಕ ಸಾವು

0
41
ಸಾವು

ಮಂಗಳೂರು: ಮನೆಯ ಚಾವಣಿಯಿಂದ ಬಿದ್ದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಕಡಬ ನೆಟ್ಟಣದಲ್ಲಿ ನಡೆದಿದೆ.
ಮೃತರನ್ನು ಅಲಂಕಾರು ಗ್ರಾಮದ ಶರವೂರು ನಿವಾಸಿ ಪದ್ಮನಾಭ ಎಂಬವರ ಪುತ್ರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ನೆಟ್ಟಣದ ಮೇರೊಂಜಿ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಚಾವಣಿಯಿಂದ ಹರಿಪ್ರಸಾದ್ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ನೆಟ್ಟಣದ ಪ್ರಕಾಶ್ ಎಂಬವರ ಜೀಪಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ.

Previous articleನೈತಿಕ ಪೊಲೀಸ್ ಗಿರಿ ಐವರ ವಶ
Next articleಸಚಿವ ಸಂಪುಟ ಸಭೆ ಅಂತ್ಯ