ಮುರಿದ ಬಾರ್ಜ್: ನದಿ ಮಧ್ಯೆ ಸಿಲುಕಿದ ಪ್ರಯಾಣಿಕರು

0
12

ಪಣಜಿ: ಗೋವಾದ ಚೋಡನ್ ಬಾರ್ಜ್‌ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಕಾರು ಮತ್ತು ಬೈಕ್‌ಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡ ಘಟನೆ ಮಂಗಳವಾರ ನಡೆದಿದೆ.
ಈ ಬಾರ್ಜ್‌ನಲ್ಲಿ ಎರಡು ದೊಡ್ಡ ವಾಹನಗಳು ಮತ್ತು ಕನಿಷ್ಠ ಏಳರಿಂದ ಎಂಟು ದ್ವಿಚಕ್ರ ವಾಹನಗಳಿದ್ದವು. ಕ್ರೇನ್ ಬರುವವರೆಗೆ ಇದರ ಜತೆ ಇದ್ದ ಪ್ರಯಾಣಿಕರು ಅಲ್ಲಿಯೇ ಇರುವಂತಾಯಿತು.
ದೋಣಿ ದುರಸ್ತಿಯಾಗುವವರೆಗೆ ದಡಕ್ಕೆ ಬರಲು ಸಾಧ್ಯವಿಲ್ಲ. ಜತೆಗೆ ಈ ದೋಣಿ ದುರಸ್ತಿ ಆಗುವವರೆಗೆ ಇತರ ದೋಣಿಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ದೋಣಿ ಮೂಲಕ ನದಿ ದಾಟಲು ಹಲವು ವಾಹನಗಳು ಈಗಾಗಲೇ ಸಾಲುಗಟ್ಟಿ ನಿಂತಿದ್ದು ಕಂಡುಬಂತು.
ಘಟನೆ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಅಶ್ವಿನ್ ಚೋಡಂಕರ್, ಶಾಸಕರು ಈ ಬಗ್ಗೆ ಗಮನಹರಿಸಬೇಕಿದೆ. ರಾತ್ರಿ ಒಂಬತ್ತು ಅಥವಾ ಹತ್ತು ಗಂಟೆಯ ನಂತರ ಬಾರ್ಜ್‌ನಲ್ಲಿ ಪಾರ್ಟಿಗಳು ನಡೆಯುತ್ತವೆ ಎಂದು ದೂರಿದರು.

Previous articleಸಿಡಿದೆದ್ದಿರುವ ಲಿಂಗಾಯತ ನಾಯಕರನ್ನು ಸಮಾಧಾನಪಡಿಸಿ
Next articleಬಾವಿಯಲ್ಲಿ ಬಿದ್ದ ಗೂಳಿಯ ರಕ್ಷಣೆ