Home ತಾಜಾ ಸುದ್ದಿ ಮಸ್ಕಿಯಲ್ಲಿ ತಡವಾಗಿ ಮತದಾನ ಆರಂಭ

ಮಸ್ಕಿಯಲ್ಲಿ ತಡವಾಗಿ ಮತದಾನ ಆರಂಭ

0

ಮಸ್ಕಿ: ಪಟ್ಟಣದಲ್ಲಿನ ಮತಗಟ್ಟೆಯಲ್ಲಿ ಮತ ಯಂತ್ರದೋಷದಿಂದ ತಡವಾಗಿ ಮತದಾನ ಆರಂಭವಾದರೆ, ಮತಗಟ್ಟೆ ಮುಂದೆ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ದ್ವಜವಿರುವ ತಮ್ಮ ಕಾರು ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದ‌ ಮತದಾನ ಆರಂಭವಾಗಿದ್ದು, ಅಲ್ಲಲ್ಲಿ ಕೆಲವು ವಾಗ್ವಾದ, ತಡವಾಗಿ ಮತದಾನ ಆರಂಭದ ಘಟನೆಗಳಾಗಿವೆ. ೮೯‌ಮತಗಟ್ಟೆಯಲ್ಲಿ ಇವಿಎಂ ಮಷಿನ್ ದೋಷದಿಂದ ೩೦ ನಿಮಿಷ ತಡವಾಗಿ ಮತದಾನ ಆರಂಭಿಸಲಾಯಿತು. ಇನ್ನು ಮತಗಟ್ಟೆ ಸಂಖ್ಯೆ ೮೮ರ ಮುಂದೆಯೇ ಪ್ರತಾಪಗೌಡ ಪಾಟೀಲ್ ಮನೆ ಇದ್ದು, ಬಿಜೆಪಿ ಧ್ವಜ ಬಳಸಿದ ಕಾರು ನಿಲ್ಲಿಸಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿ ವಿವಾದಕ್ಕೆ ಇಡಾಯಿತು. ಇನ್ನು ತಾಲೂಕಿನ ಹರ್ವಾಪೂರ ಗ್ರಾಮದಲ್ಲಿ ಮತದಾರರಿಗೆ ಚೀಟಿ ಹಂಚುವ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಮಧ್ಯಸ್ಥಿಕೆ ಬಳಿಕ ಇತ್ಯರ್ಥವಾಯಿತು. ತಾಲೂಕಿನ ಗುಂಡಾ ಗ್ರಾಮದಲ್ಲಿ‌ ಮತದಾನ ಕೇಂದ್ರ ಹಾಗೂ ಕೆಲ ಕಡೆಗಳಲ್ಲಿ‌ ವಾಮಾಚಾರ ನಡೆದಿದೆ ಎಂದು ಗಲಾಟೆ ನಡೆದ ಘಟನೆಗಳು ಕೂಡ ವರದಿಯಾಗಿವೆ.

Exit mobile version