Home ತಾಜಾ ಸುದ್ದಿ ಪಕ್ಷೇತರ ಅಭ್ಯರ್ಥಿ ಚಿಹ್ನೆ ಬಾವುಟ ಹಾಕಿಕೊಂಡು ಮತಗಟ್ಟೆ ಆವರಣಕ್ಕೆ ಬಂದ ಅಭ್ಯರ್ಥಿ ಕಾರ್

ಪಕ್ಷೇತರ ಅಭ್ಯರ್ಥಿ ಚಿಹ್ನೆ ಬಾವುಟ ಹಾಕಿಕೊಂಡು ಮತಗಟ್ಟೆ ಆವರಣಕ್ಕೆ ಬಂದ ಅಭ್ಯರ್ಥಿ ಕಾರ್

0

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರ ವ್ಯಾಪ್ತಿಯ ಅದರಗುಂಚಿ ಮತಗಟ್ಟೆ ಕೇಂದ್ರದೊಳಗೆ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಚಿಹ್ನೆ ಕುಕ್ಕರ್ ಬಾವುಟ ಪ್ರದರ್ಶಿಸುತ್ತಿದ್ದ ವಾಹನವನ್ನು ಹೊರಕ್ಕೆ ಕಳುಹಿಸಲಾಯಿತು. ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಅವರು ಪತ್ನಿ, ಪುತ್ರಿ ಜೊತೆ ಕಾರಿನಲ್ಲಿ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದರು. ಕಾರಿನ ಮುಂದೆ, ಅವರ ಚಿಹ್ನೆ ಕುಕ್ಕರ್ ಪ್ರದರ್ಶಿಸುತ್ತಿದ್ದ ಬಾವುಟ ಹಾಕಲಾಗಿತ್ತು. ಇದನ್ನು ಗಮನಿಸಿದ ಸೇನಾದಳದ ಸಿಬ್ಬಂದಿ, ವಾಹನ ತಡೆದು, ಕೇಂದ್ರದಿಂದ ಹೊರ ಕಳುಹಿಸಿದರು.

Exit mobile version