ಬೆಳಗಾವಿ: ಬಿಜೆಪಿಯ ಕೆಲವು ತಪ್ಪು ನಿರ್ಣಯಗಳಿಂದ ಅಥಣಿ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು ಎಂದು ಮಾಜಿ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ಅಥಣಿ ತಾಲೂಕು ನಂದಗಾಂವ ಗ್ರಾಮದಲ್ಲಿ ದಸರಾ ಹಬ್ಬದ ನಿಮಿತ್ತ ನಡೆದ ದುರ್ಗಾದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದು ದೇವರಿಗೆ ಗೊತ್ತು. ಆದರೆ ಮಾಜಿ ಶಾಸಕ ಅಥಣಿ ಕ್ಷೇತ್ರದ ಅಭಿವೃದ್ಧಿಗೆ ತಂದ ಅನುದಾನವನ್ನು ಸದ್ಯದ ಶಾಸಕರು ಮುಂದುವರೆಸಿಕೊಂಡು ಹೋಗಲಿ ಎಂದು
ಧಾರ್ಮಿಕ ಕಾರ್ಯಕ್ರಮದಲ್ಲಿ ದಾರಿ ತಪ್ಪಿ ಏನೆನೋ ಮಾತನಾಡುವುದು ಬೇಡ. ಮುಂದೆ ಕಾರ್ಯಕರ್ತರ ಸಭೆ ಕರೆದು ಎಲ್ಲ ವಿಷಯ ಬಿಡಿಸಿ ಹೇಳುತೇನೆ. ಒಳ್ಳೆಯ ಕೆಲಸ ಮಾಡೋಣ, ದ್ವೇಷ ರಾಜಕಾರಣ ಮಾಡುವುದು ಬೇಡ. ದುರ್ಗಾದೇವಿ ಒಳ್ಳೆಯ ಮಳೆ-ಬೆಳೆ ನೀಡಲಿ. ಜನರಿಗೆ ಕಷ್ಟ-ಸುಖ ಎದುರಿಸುವ ಶಕ್ತಿ ಮತ್ತು ಧೈರ್ಯ ನೀಡಲಿ ಎಂದರು. ಮಾಜಿ ಸಚಿವ ಶ್ರೀಮಂತ ಪಾಟೀಲ ಇತರರಿದ್ದರು.