Home ತಾಜಾ ಸುದ್ದಿ ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ

ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ

0
ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ

ಮಂಗಳೂರು: 50 ಕೋಟಿ ಆಫರ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಏರ್ ಪೋರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹರೀಶ್ ಪೂಂಜಾ ಪೇಜ್‌ನಲ್ಲಿ ಕಲೆಕ್ಷನ್ ಮಾಸ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿ ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು 1983ರಲ್ಲಿ ಶಾಸಕನಾಗಿ, 1985ರಲ್ಲೇ ಸಚಿವನಾಗಿದ್ದವನು. ಅಂದಿನಿಂದ ಈವರೆಗೆ ಯಾರೂ ನನ್ನನ್ನು ಈ ರೀತಿ ಯಾರು ಕರೆದಿರಲಿಲ್ಲ. ಶಾಸಕ ಹರೀಶ್​ ಪೂಂಜಾ ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ. ಆ ಮಾತನ್ನು ಹಿಂದಿನ ಸರ್ಕಾರ ಹಾಗೂ ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದರು. ಆಪರೇಷನ್ ಕಮಲ ಬಗ್ಗೆ ನನಗೆ ಗೊತ್ತಿಲ್ಲ, ರವಿ ಗಣಿಗ ಜತೆ ಮಾತನಾಡಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಆಗ್ತಿದೆ ಅಂತಾ ಮಾಹಿತಿ ಇತ್ತು. ಆದರೆ ಬಿಜೆಪಿಯವರಿಗೆ ಅದು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿಯಿಂದ ಕಾಂಗ್ರೆಸ್​ ಶಾಸಕರಿಗೆ ಹಣದ ಆಫರ್​ ನೀಡಿದ್ದಾರೆಂಬ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಾತನಾಡಿ ಇದರ ಹಿಂದೆ ಭಾರಿ ಷಡ್ಯಂತ್ರ ನಡೆದಿದೆ, ಇದ್ಯಾವುದೂ ಫಲ ನೀಡಲ್ಲ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ಷಡ್ಯಂತ್ರ ನಡೆಸಲು ಕೆಲ ದೊಡ್ಡವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಅವರ ಯಾವ ಪ್ರಯತ್ನಗಳು ಫಲ ನೀಡಲ್ಲ ಎಂದರು.

https://samyuktakarnataka.in/%e0%b2%8e%e0%b2%9a%e0%b3%8d%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d%e0%b2%aa%e0%b2%bf-%e0%b2%95%e0%b2%a1%e0%b3%8d%e0%b2%a1%e0%b2%be%e0%b2%af-%e0%b2%86%e0%b2%a6/