ದೆಹಲಿ: ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು ‘ಇಂಡಿಯಾ’ ಎಂದು ಹೇಳಿಕೊಳ್ಳುತ್ತಾರೆ. ಆದರೆ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಕೇಳಲು ಅವರು ಸಿದ್ಧರಿಲ್ಲ. ಇದು ಯಾವ ರೀತಿಯ INDIA? ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳು ಇತರ ದೇಶಗಳಿಂದ ಅತ್ಯುನ್ನತ ಗೌರವಗಳನ್ನು ಪಡೆದಿದ್ದಾರೆ. ಇದು ಕೇವಲ ಸರಕಾರದ ಸಾಧನೆಯಷ್ಟೇ ಅಲ್ಲ. ದೇಶದ ಸಾಧನೆಯಾಗಿದೆ. ಆದರೆ, ಪ್ರತಿಪಕ್ಷಗಳು ಪಕ್ಷಪಾತ ರಾಜಕಾರಣಕ್ಕೆ ಆದ್ಯತೆ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದರು.