ಪತಿಗೆ ತಪ್ಪಿದ ಕೈ ಟಿಕೆಟ್‌: ಪಕ್ಷೇತರರಾಗಿ ಪತ್ನಿ ಸ್ಪರ್ಧೆ

0
27
ಸೌಭಾಗ್ಯ ಬಸವರಾಜನ್

ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಮಾಜಿ ಶಾಸಕ ಎಸ್.ಕ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜನ್ ಅವರು, ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದು, ಈ ಬಾರಿ ಪಕ್ಷೇತರವಾಗಿ ನನ್ನ ಪತ್ನಿ ಸೌಭಾಗ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಭಾರಿ ಹೊಡೆತ ಬಿದ್ದಂತಾಗಿದೆ.
ಕ್ಷೇತ್ರದಲ್ಲಿ ಶೇ. 50ಕ್ಕೂ ಹೆಚ್ಚು ಮಹಿಳಾ ಮತದಾರರರಿದ್ದು ಮಹಿಳಾ ಪ್ರತಿನಿಧಿಯಾಗಿ ಕಣಕ್ಕಿಳಿಯುವೆ ಎಂದಿರುವ ಸೌಭಾಗ್ಯ ಬಸವರಾಜನ್. ಈ ಹಿಂದೆ ನಾಲ್ಕು ಬಾರಿ ಜಿಪಂ ಅಧ್ಯಕ್ಷಳಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಪಂ, ತಾಪಂ, ಅಧ್ಯಕ್ಷಳಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಂದೂ ಸೋಲು ಕಂಡಿಲ್ಲ. ಕ್ಷೇತ್ರದ ಮಹಿಳೆಯರು ನನ್ನ ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Previous articleಬಂಡೀಪುರದಲ್ಲಿ ಪ್ರಧಾನಿ ಸಫಾರಿ
Next articleಪ್ರಧಾನಿ ಸಫಾರಿ ಮಾಡಿದರೆ ಜನ ವೋಟ್‌ ಒತ್ತಿ ಬಿಡ್ತಾರಾ?