ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: ಇಬ್ಬರು ಗಾಯಾಳು ಬೆಂಗಳೂರಿಗೆ ಶಿಪ್ಟ್

0
27

ಹಾವೇರಿ: ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಆಗಿರುವುದು ದುರದೃಷ್ಟಕರ ಈ ಘಟನೆ ಆಗಬಾರದಾಗಿತ್ತು. ನಾಲ್ಕು ಜನರು ಮೃತಪಟ್ಟಿದ್ದು, ಇಬ್ಬರು ಗಾಯಾಳುಗಳನ್ನ ಬೆಂಗಳೂರಿಗೆ ಶಿಪ್ಟ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಹೊರವಲಯದ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ವೆಚ್ಚ ಸರಕಾರ ಭರಿಸಲಿದೆ. ಮೃತರ ಕುಟುಂಬಗಳಿಗೆ ಈಗಾಗಲೇ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿದ್ದಾರೆ. ಗೋದಾಮಿನಲ್ಲಿ 500 ರಿಂದ1000 ಕೆಜಿ ಸಂಗ್ರಹ ಮಾಡಲು ಅವಕಾಶವಿತ್ತು. ಇವರು ಹೆಚ್ಚಿನ‌ ದಾಸ್ತಾನು ಮಾಡಿದ್ದರು. ಈ ಬಗ್ಗೆ ಸೂಕ್ತ ತನಿಖೆ ಮಾಡಿಸುತ್ತೇವೆ. ‌ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ತರುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆ ಆಗದಬಾರದು ಅಂತಾ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಹೆಚ್ಚಿಗೆ ಸಂಗ್ರಹ ಮಾಡಿದ್ದು ಮೇಲ್ನೋಟಕ್ಕೆ ಸಾಭಿತಾಗುತ್ತದೆ. ಇಲ್ಲಿ ಸರಿಯಾದ ಸುರಕ್ಷತಾ ಕ್ರಮಗಳು ಇರಲಿಲ್ಲ. ಲೈಸೆನ್ಸ್ ರಿನೀವಲ್‌ಗೆ ಅರ್ಜಿ ಕೊಟ್ಟಿದ್ದಾರೆ. ಜನವಸತಿ ಪ್ರದೇಶದಲ್ಲಿ ಪರ್ಮಿಷನ ಎಂದು ಹೇಳಿದರು.
ನಾಲ್ವರ ಮೇಲೆ ಕೇಸ್ ದಾಖಲು: ಹಾವೇರಿಯ ಆಲದಕಟ್ಟಿಯ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಘಟನೆಗೆ ಸಂಬಂಧಿಸಿದಂತೆ ನಾಲ್ವರ ಮೇಲೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟಾಕಿ ಅಂಗಡಿ ಮಾಲೀಕ ಹಾಗೂ ಕಟ್ಟಡದ ಮಾಲೀಕನ‌ ಮೇಲೆ ಪ್ರಕರಣ ದಾಖಲಾಗಿದ್ದು, ಕೆ ಬಿ ಜಯಣ್ಣ, ಸಿಜಿ ವಿರೇಶ, ವಿಜಯ ಯರೇಸೀಮಿ, ಕುಮಾರಪ್ಪ ಸಾತೇನಹಳ್ಳಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ವೆಲ್ಡಿಂಗ್ ಮಾಡುವಾಗ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಗ್ನಿ ಅವಘಡದಲ್ಲಿ ದ್ಯಾಮಪ್ಪ, ರಮೇಶ, ಶಿವಲಿಂಗಪ್ಪ , ಕೆಬಿ ಜಯಣ್ಣ ಸಜೀವ ದಹನಗೊಂಡಿದ್ದು, ವಾಸೀಂ ಹಾಗೂ ಶೇರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Previous articleಅಮೆಜಾನ್ ಮ್ಯಾನೇಜರ್‌ ಹತ್ಯೆ!
Next articleಮಕ್ಕಳೊಂದಿಗೆ ರಕ್ಷಾಬಂಧನ್‌ ಆಚರಿಸಿದ ಪ್ರಧಾನಿ