ಪಕ್ಷ ತೊರೆದಿದ್ದಕ್ಕಾಗಿ ಅಣಕು ಶವಯಾತ್ರೆ

0
27
ಶವಯಾತ್ರೆ

ಇಳಕಲ್: ಇಲ್ಲಿನ ನಗರಸಭೆಯ ೧೪ ನೇಯ ವಾರ್ಡಿನ ಸದಸ್ಯೆ ಶಾರದಾ ಪತ್ತಾರ ಬಿಜೆಪಿ ತೊರೆದು ಎಸ್ ಆರ್ ಎನ್ ಇ ಬಳಗವನ್ನು ಸೇರಿದ ಹಿನ್ನೆಲೆಯಲ್ಲಿ ಅಲ್ಲಿನ ಮತದಾರರು ಸದಸ್ಯೆಯ ಭಾವಚಿತ್ರದ ಅಣಕು ಶವಯಾತ್ರೆ ನಡೆಸಿದ ಘಟನೆ ಸೋಮವಾರದಂದು ನಡೆದಿದೆ. ಅಲ್ಲಿನ ಮತದಾರರು ಮತ್ತು ಹಿರಿಯರು ಸೇರಿಕೊಂಡು ಸದಸ್ಯೆಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಹಲಗೆ ಬಾರಿಸುತ್ತಾ ಲಬೋ ಲಬೋ ಬಾಯಿ ಬಡೆದುಕೊಳ್ಳುತ್ತಾ ಗಲ್ಲಿಯಲ್ಲಿ ತಿರುಗಾಡಿದರು. ಒಂದು ಪಕ್ಷದಿಂದ ಆರಿಸಿ ಬಂದು ಬೇರೊಂದು ಬಳಗಕ್ಕೆ ಯಾರಿಗೂ ಕೇಳದೇ ಒಮ್ಮಿಂದೊಮ್ಮಲೇ ಸೇರಿದ್ದು ಮತದಾರರಲ್ಲಿ ಆಕ್ರೋಶ ಮೂಡಿಸಿದೆ.

Previous articleಪೊಲೀಸರು ದಿಢೀರ್ ದಾಳಿ: ಅಕ್ರಮ ಮಧ್ಯ ಮಾರಾಟ: ಬಂಧನ
Next articleಬೆಳಗಾವಿ ಬಿಜೆಪಿಯಲ್ಲಿ ಟೆನ್ಶನ್ ಟೆನ್ಶನ್…