ಪಂಚಮಸಾಲಿ ಮೀಸಲಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಬಿಎಸ್‌ವೈ

0
13
BSY

ವಿಧಾನಸಭೆ: ಪಂಚಮಸಾಲಿ ಮೀಸಲಾತಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸದನಕ್ಕೆ ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಪಂಚಮಸಾಲಿ ಸಮುದಾಯಯಕ್ಕೆ ೨ಎ ಮೀಸಲಾತಿ ನೀಡುವ ಬಗ್ಗೆ ನಾನು ಪ್ರಾಮಾಣಿಕ ಶ್ರಮ ಹಾಕಿದ್ದೇನೆ. ನನ್ನ ಅವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಆಗಲಿಲ್ಲ. ಪಂಚಮಸಾಲಿ ಸಮುದಾಯವನ್ನು ೨ಎಗೆ ಸೇರಿಸಿ ಎಂಬುದು ನನ್ನ ಒತ್ತಾಯವಾಗಿದೆ. ಈ ಹಿಂದೆ ನಾನು ಪಂಚಮಸಾಲಿ ಸಮುದಾಯಕ್ಕೆ ೩ಬಿ ವರ್ಗಕ್ಕೆ ಮೀಸಲಾತಿ ತಂದವನು. ಪ್ರವರ್ಗ ೨ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಒತ್ತಾಯಿಸಿತ್ತು. ತಾಂತ್ರಿಕ ದೋಷದಿಂದ ಹಿನ್ನಡೆ ಆಗಬಾರದೆಂಬ ಸದುದ್ದೇಶದಿಂದ ಹಿಂದುಳಿದ ವರ್ಗ ಆಯೋಗ ವರದಿ ನೀಡಲು ಸೂಚಿಸಿದ್ದಾರೆ ಎಂದರು.

Previous articleಐದೂವರೆ ಗಂಟೆ ಕಡ್ಡಾಯವಾಗಿ ಶಾಲೆ ನಡೆಸಿ ಶಿಕ್ಷಣ ಇಲಾಖೆ ಸೂಚನೆ
Next articleಮೀಸಲಾತಿ ವಿಚಾರವಾಗಿ ಶೀಘ್ರ ಸರ್ವಪಕ್ಷ ಸಭೆ: ಸಿಎಂ