ಪಂಚಮಸಾಲಿ ಮೀಸಲಾತಿಗಾಗಿ ಮತ್ತೆ ಹೋರಾಟ

0
11

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಾಂಕೇತಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು ಕಳೆದ 3 ವರ್ಷಗಳಿಂದ 2 ಮೀಸಲಾತಿ ಹೋರಾಟ ಮಾಡುತ್ತಾ ಬರುತ್ತೇದ್ದೇವೆ ಹಿಂದಿನ ಸರ್ಕಾರ 2 ಮೀಸಲಾತಿ ಬದಲಾಗಿ 2 ಡಿ ಮೀಸಲಾತಿ ನೀಡಿತ್ತು ಸರ್ಕಾರ ಬದಲಾವಣೆ ನಂತರ 2 ಡಿ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿತ್ತಿದೆ ,ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ನಮ್ಮ ಸಮುದಾಯ ನಾಯಕರು ,ಶಾಸಕರು ಎಲ್ಲರೂ ಸಿ.ಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ ಬಂದಿದ್ದೇವಿ ,ಸಿದ್ದರಾಮಯ್ಯನವರು ನಮಗೆ ಬಜೆಟ್ ನಂತರ ಮಾತುನಾಡುತ್ತೇನೆ ಎಂದು ಹೇಳಿದರು , ಆದರೆ ಬಜೆಟ್ ಮುಗಿದು 2 ತಿಂಗಳು ಆದ್ರೂ ಸಿಎಂ ಸಿದ್ದರಾಮಯ್ಯ ಕಡೇಯಿಂದ ಯಾವದೇ ಪ್ರತಿಕ್ರಿಯೆ ಬಂದಿಲ್ಲ ,ಸರ್ಕಾರದ ಗಮನ ಸೆಳೆಯಲು ಸೆಪ್ಟಂಬರ್ .10 ರಂದು ನಿಪ್ಪಾಣಿ ಯಿಂದ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಆರಂಭಿಸುತ್ತೇವೆ, ನಿಪ್ಪಾಣಿ ಹೋರಾಟ ಆರಂಭವಾಗಿ ಜಮಖಂಡಿ ,ಚಡಚಣ ಹೀಗೆ ರಾಜ್ಯದ ವ್ಯಾಪ್ತಿ ಹೋರಾಟ ಮಾಡುತ್ತೇವೆ , ತಾಲೂಕಿಗಳಲ್ಲಿ ಮೀಸಲಾತಿ ಜಾಗೃತಿ ಮೂಡಿಸಿ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದರು.
ಈಗಾಗಲೇ ನಿಪ್ಪಾಣಿ ಜನತೆಯಲ್ಲಿ ಜಾಗೃತಿ ಮೂಡಿಸಲಾಗಿದೆ ಅಲ್ಲಿ ಬೆಳ್ಳಗೆ 9.00 ಗಂಟೆಗೆ ಶಿವಾಜಿ ,ಚೆನ್ನಮ್ಮ .ಬಸವಣ್ಣ ಮೂರ್ತಿಗೆ ಮಾರ್ಲಾಪಣೆ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತುಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುತ್ತೇವೆ ,ಲೋಕಸಭಾ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿಯಿದ್ದು, ನಮ್ಮ ಸಮಾಜವನ್ನು ಯಾರೂ ಕಡೆಗಣಿಸುವಂತಿಲ್ಲ. 2024ರ ಒಳಗೆ ನಮಗೆ ಮೀಸಲಾತಿ ಕೊಡಬೇಕು.2ಎ ಮೀಸಲಾತಿಗೆ ಕಾನೂನು ತೊಡಕು ಎದುರಾದರೆ ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಾದರೂ ಸೇರಿಸಬೇಕು’ ಎಂದು ಆಗ್ರಹಿಸಿದರು ,ನಮ್ಮ ಲಿಂಗಾಯತ ಶಾಸಕರು ,ಸಚಿವರಯಲ್ಲಿ ಯಾವದೇ ಭಿನ್ನಾಭಿಪ್ರಾಯಗಳು ಇಲ್ಲಾ , ಕಾಂಗ್ರೆಸ್ ಸರ್ಕಾರದ ಮೇಲೆ ಯಾವದೇ ಮೃದು ಧೋರಣೆಯಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಆರ್. ಕೆ ಪಾಟೀಲ ರಾಜಶೇಖರ್ ಪಾಟೀಲ ಸೇರಿದಂತೆ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Previous article400 ಮೀ. ಓಟ: ಲೇಖನ ಜಿಲ್ಲಾ ಮಟ್ಟಕ್ಕೆ ಆಯ್ಕೆ
Next articleಅಮೃತ ಸಮಾಚಾರ…