ನಾಳೆ ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುವೆ… : ಸುಧಾಕರ್

0
25

ಬೆಂಗಳೂರು: ನಾಳೆ ನಾನು ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುತ್ತೇನೆ, ಯಾರೇ ತಪ್ಪು ಮಾಡಿದ್ರೂ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಸುಧಾಕರ್ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾಳೆ ನಾನು ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುತ್ತೇನೆ. ಮೃತಪಟ್ಟವರ ಕುಟುಂಬಸ್ಥರನ್ನೂ ಭೇಟಿ ಮಾಡುತ್ತೇನೆ. ತನಿಖೆ ನಡೆಸಲು ಸಮಿತಿ ರಚನೆ ಮಾಡಿದ್ದೇವೆ, ತನಿಖಾ ವರದಿ ಬರಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.ಡೈರೆಕ್ಟರ್​​​ ನೇಮಕ ಪ್ರಕ್ರಿಯೆ ಬಗ್ಗೆ ಸೋಮಶೇಖರ್​​ ರೆಡ್ಡಿಗೆ ಗೊತ್ತಿಲ್ಲ, ಡೈರೆಕ್ಟರ್​​ ನೇಮಕ ಪ್ರಕ್ರಿಯೆ ಸರಿಯಾಗಿಯೇ ಆಗಿದೆ ಎಂದು ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Previous articleಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಅವಹೇಳನಕಾರಿ ಹೇಳಿಕೆ…! ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ..!
Next articleವಿಶ್ವದ ದಿಗ್ಗಜರಿಂದ ಮೋದಿಗೆ ಬರ್ತಡೇ ಶುಭಾಶಯ..! ನಮೋ 72ನೇ ಜನ್ಮದಿನದ ಆಚರಣೆ ಹೇಗಿರುತ್ತೆ..?