ದೇವರ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟ ಅಪ್ಪು

0
131

ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ‌. ಪುನೀತ್​ ಮೃತರಾಗಿ 11 ತಿಂಗಳು ಕಳೆದಿದ್ದು, ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ ವಿವಿಧ ರೀತಿಯಲ್ಲಿ ವ್ಯಕ್ತವಾಗುತ್ತಲೇ ಇದೆ. ಇದೀಗ ಲಕ್ಕಿಮ್ಯಾನ್ ಬಿಡುಗಡೆಯ ಖುಷಿಯನ್ನು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ ಅಭಿಮಾನಿಗಳು. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಲಕ್ಕಿಮ್ಯಾನ್ ಬಿಡುಗಡೆ ಸಂಭ್ರಮ ಜೋರಾಗಿದೆ. ಅಭಿಮಾನಿಗಳು ಬಿಗ್ ಸ್ಕ್ರೀನ್​ನಲ್ಲಿ ಪವರ್ ಸ್ಟಾರ್ ಅನ್ನು ದೇವರ ರೂಪದಲ್ಲಿ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಥಿಯೇಟರ್​​ ಎದುರು ಸಂಭ್ರಮಾಚರಿಸಿದ್ದಾರೆ.

Previous article55ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್​ಸ್ಟಾರ್ ಅಕ್ಷಯ್ ಕುಮಾರ್
Next articleರಣ್​​ಬೀರ್​-ಆಲಿಯಾ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ