ದೀಪಾವಳಿಯಂದೇ ಅಗ್ನಿ ಅವಘಡ

0
37
Davangere

ದಾವಣಗೆರೆ: ದೀಪಾವಳಿಯ ಮೊದಲ ದಿನದಂದೇ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಲ್ಲಿನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಮೈಸೂರು ಮೆಡಿಕಲ್ ಬಯೋ ಕೆಮಿಕಲ್ ಏಜೆನ್ಸಿ ಅಗ್ನಿಯಿಂದ ಹೊತ್ತಿ ಉರಿದಿದೆ.
ಬಯೋ ಕೆಮಿಕಲ್ಸ್‌ನ್ನು ಎಲ್ಲೆಡೆ ಸರಬರಾಜು ಮಾಡುತ್ತಿದ್ದ ಮೈಸೂರು ಬಯೋ ಕೆಮಿಕಲ್ಸ್‌ ಏಜೆನ್ಸಿಯಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಅಗ್ನಿದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಏಜೆನ್ಸಿಯಲ್ಲಿ ಅಮಾವಾಸ್ಯೆಯ ಪ್ರಯುಕ್ತ ಲಕ್ಷ್ಮೀ ಪೂಜೆ ಮಾಡಲಾಗಿತ್ತು. ಸಿಬ್ಬಂದಿ ಪಟಾಕಿ ಸಿಡಿಸುವ ವೇಳೆ ಮೊದಲ ಮಹಡಿಯ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಬಯೋ ಕೆಮಿಕಲ್ಸ್ ಗೆ ಕಿಟಕಿಯ ಮೂಲಕ ಪಟಾಕಿಯ ಕಿಡಿ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎನ್ನಲಾಗಿದೆ.

Previous articleಅಪ್ರಾಪ್ತ ಚಲಾಯಿಸುತ್ತಿದ್ದ ಸರ್ಕಾರಿ ಕಾರು ಅಪಘಾತ
Next articleಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ: ಮುಖ್ಯಮಂತ್ರಿ ಹರ್ಷ