ತುರ್ತು ಸೇವೆ ಇಲಾಖೆಗೆ 1600 ಸಿಬ್ಬಂದಿ ನೇಮಕ : ಆರಗ ಜ್ಞಾನೇಂದ್ರ

0
24

ಬೆಂಗಳೂರು: ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆಗೆ ಸುಮಾರು 1600 ನೂತನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರಗೆ ಒಂದು ವರ್ಷದ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಹೊಸತಾಗಿ ನೇಮಕಗೊಂಡ ಸಿಬ್ಬಂದಿಗೆ ಅಗ್ನಿ ಅವಘಡದಂಥಹ ಪರಿಸ್ಥಿತಿ ಎದುರಿಸಲು ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತಿದೆ. ಈ ವರ್ಷದಿಂದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇನ್ನೂ ಆರು ತಿಂಗಳುಗಳ ಕಾಲ ವಿಪತ್ತು ನಿರ್ವಹಣೆ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ಹೇಳಿದರು.

Previous articleಓಣಂ ಊಟ ಸವಿದ ಡಿಕೆಶಿ, ಟ್ವೀಟ್ ಬಾಣ ಬಿಟ್ಟ ಬಿಜೆಪಿ!
Next articleರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡುವುದು ನಮ್ಮ ಗುರಿ ; ಡಿ.ಕೆ ಶಿವಕುಮಾರ್