ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಮಾಡಿದರೆ ಸಹಿಸಲ್ಲ‌

0
14

ಹುಬ್ಬಳ್ಳಿ: ಸುಮಾರು ಹನ್ನೊಂದು ವರ್ಷಗಳ ಹಿಂದಿನ ಸೌಜನ್ಯ ಕೊಲೆ ಪ್ರಕರಣ ಇಟ್ಟುಕೊಂಡು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಯಾರೇ ಮಾತನಾಡಿದರೂ ನಾನು ಸಹಿಸಲಾರೆ ಎಂದು ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಜೈನ ಮುನಿ ಗುಣಧರನಂದಿ ಸ್ವಾಮೀಜಿ ನೋವಿನಿಂದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಕೊಲೆ ಪ್ರಕರಣದಿಂದ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಸೌಜನ್ಯಳ ಕೊಲೆ ಮಾಡಿದವರ ವಿರುದ್ಧ ಕಾನೂನು ಕ್ರಮವಾಗಲಿ. ಮುಖ್ಯವಾಗಿ ಕೊಲೆ ಮಾಡಿದವರ ಮನಪರಿವರ್ತನೆಯಾಗಲಿ. ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಕೆಲ ಸದಸ್ಯರು ವಿವಾದಕ್ಕೆ ಸಿಲುಕಿದ್ದು, ಈಗಲೂ ವಿವಾದದ ಬಿಸಿ ಆರಿಲ್ಲ. ಆಧಾರ ರಹಿತವಾಗಿ ಈ ಪ್ರಕರಣದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಗುರಿ ಮಾಡುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪದೇ ಪದೆ ಹೆಗ್ಗಡೆಯವರ ಹೆಸರು ಪ್ರಸ್ತಾಪಿಸಿ ಅವರನ್ನೇ ಗುರಿ ಮಾಡುತ್ತಿರುವುದು ಮಾನಸಿಕ ಹಿಂಸೆ ನೀಡುತ್ತದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡುವುದಕ್ಕೂ ಮುನ್ನವೇ ಸಿನಿಮಾ ನಿರ್ಮಾಣ ಮಾಡಲು ಕೆಲವರು ಮುಂದಾಗಿರುವುದು ಖೇದಕರ ಸಂಗತಿಯಾಗಿದೆ ಎಂದರು.
ಒಂದು ವೇಳೆ ವೀರೇಂದ್ರ ಹೆಗ್ಗಡೆಯವರು ಅಪರಾಧಿ ಆಗಿದ್ದಲ್ಲಿ ಅವರಿಗೆ ಜೈಲಾಗಲಿ. ಅವರು ಅಪರಾಧಿ ಎಂದು ಯಾರೋ ನಿರ್ಧಾರ ಮಾಡೋಕೆ ಹೊರಟಿರುವುದು ಸರಿಯಲ್ಲ. ತನಿಖೆ ಮಾಡಲು ವಿವಿಧ ತನಿಖಾ ತಂಡಗಳಿವೆ. ನಮಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ, ಪೊಲೀಸ್ ಇಲಾಖೆ ಹಾಗೂ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದರು.

Previous articleಕರ್ನಾಟಕ ಮಾದರಿ ಆಡಳಿತ ಇಡೀ ದೇಶಕ್ಕೆ ಅವಶ್ಯ
Next articleನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ