ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ

0
30

ಬೆಂಗಳೂರು: ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಇತ್ತಿಚೆಗೆ ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ BSY ಬ್ರಿಗೇಡ್‌ಗೆ ಮಾತ್ರವೇ? ಎಂದು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು “ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಏನು ಸಂಬಂಧ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ “Internal Democracy” ಇದೆ, Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ. ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮ್ಮ ಮಹದೇವಪ್ಪನಿಗೆ, ಕಾಕಪಾಟಿಲನಿಗೆ ಕೊಟ್ಟಿದ್ದ ಮಾತು ಪೂರೈಸಲು ಕೆಲಸ ಮಾಡಿ ಎಂದು ಚಾಟಿ ಬಿಸಿದ್ದಾರೆ

Previous articleಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ
Next articleಬೀದಿಗೆ ಬಿದ್ದ ಶ್ರೀ ಗದ್ದೆರಂಗ