ಚಾಂಗ್‌ಝೌ: ಇಲ್ಲಿ ನಡೆದ ಚೀನಾ ಓಪನ್ ಸೂಪರ್ ೧೦೦೦ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆರಂಭಿಕ ಸುತ್ತಿನಲ್ಲಿ ಸೋಲು ಅನುಭವಿಸಿದರು. ವಿಶ್ವದ ಎರಡನೇ ಶ್ರೇಯಾಂಕಿತ ಭಾರತದ ಜೋಡಿ, ೧೩ನೇ ಶ್ರೇಯಾಂಕದ ಇಂಡೋನೇಷ್ಯಾದ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಮೌಲಾನಾ ಬಗಾಸ್ ಜೋಡಿಯ ವಿರುದ್ಧ ಒಂದು ಗಂಟೆ ಎಂಟು ನಿಮಿಷಗಳ ಆಟದಲ್ಲಿ ೧೭-೨೧, ೨೧-೧೧, ೧೭-೨೧ ರಿಂದ ಸೋತರು. ಈ ಜೋಡಿಯ ಸೋಲಿನ ನಂತರ ಚೀನಾ ಓಪನ್ ಭಾರತೀಯ ಸ್ಪರ್ಧೆ ಅಂತ್ಯವಾಗಿದೆ.