ಚಿತ್ರದುರ್ಗ ಮಠಕ್ಕೆ ಬೇರೆ ಸ್ವಾಮೀಜಿ ಆಯ್ಕೆ ಮಾಡಿ

0
22
ಯತ್ನಾಳ

ಚಿತ್ರದುರ್ಗ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದರಿಂದ ಮುರುಘಾ ಪೀಠಕ್ಕೆ ಬೇರೆ ಸ್ವಾಮೀಜಿ ಆಯ್ಕೆ ಮಾಡಬೇಕು ಎಂದು ಹೈಕೋರ್ಟ್‌ಗೆ ಪತ್ರ ಬರೆದಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಠಕ್ಕೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಇದೆಲ್ಲವನ್ನು ನೋಡಿಕೊಳ್ಳಲು ಬೇರೆ ಸ್ವಾಮೀಜಿಗಳು ಬೇಕು. ಈಗಾಗಲೇ ಮಾಜಿ ಶಾಸಕ ಏಕಾಂತಯ್ಯ ನೇತೃತ್ವದಲ್ಲಿ ಭಕ್ತರು ಸಭೆ ಮಾಡಿದ್ದಾರೆ. ಕೂಡಲೇ ಮುರುಘಾ ಶರಣ ಶಿವಮೂರ್ತಿ ಸ್ವಾಮೀಜಿ ಮಠದ ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಇಬ್ಬರು ಮಾಜಿ ಸಿಎಂ ಹಾಗೂ ಓರ್ವ ಮಾಜಿ ಸಿಎಂ ಪುತ್ರ ಇಲ್ಲಿನ ಅವ್ಯವಹಾರಗಳ ಬಗ್ಗೆ ಉತ್ತರ ಕೊಡಬೇಕೆಂದೂ ಹೇಳಿದರು. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಶಿವಮೂರ್ತಿ ಸ್ವಾಮಿ ಪರಮ ಭಕ್ತರು. ಮಾಜಿ ಸಿಎಂ ಪುತ್ರನೊಬ್ಬ ಹೆಲಿಕಾಪ್ಟರ್ ತೆಗೆದುಕೊಂಡು ಮಠಕ್ಕೆ ಹೋಗುತ್ತಿದ್ದ. ಯಾರು ಮಾಜಿ ಸಿಎಂಗಳು, ಯಾರು ಮಾಜಿ ಸಿಎಂ ಪುತ್ರ ಎಂದು ನೀವೇ ನೋಡಿ. ನನ್ನ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇನೆ ಎಂದರು.

Previous articleಪಿಎಸ್‌ಐ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡ: ಯತ್ನಾಳ ಆರೋಪ
Next articleʻಕೈʼ​ ಕಾರ್ಯಕರ್ತರಿಂದ ನಲಪಾಡ್​ಗೆ ತರಾಟೆ