ಗೆಲುವಿಗೆ ಆಶೀರ್ವಾದವಾದ ಅಸಿಂಧು ಮತ: ಚೀಟಿ ಮೂಲಕ ಗೆಲುವು

0
21

ಬಾಗಲಕೋಟೆ: ಅಧ್ಯಕ್ಷ ಸ್ಥಾನ ಗೆಲುವಿಗೆ ಅಸಿಂಧು ಮತ ಆಶೀರ್ವಾದವಾದರೆ, ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷ ಸ್ಥಾನದ ಅದೃಷ್ಟ ಒಲಿದ ಘಟನೆ ನಡೆಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಅದೃಷ್ಠ ಪರೀಕ್ಷೆ ನಡೆಯುವಲ್ಲಿ ಕಾರಣವಾಗಿ, ಕೊನೆಯವರೆಗೂ ಕುತೂಹಲಕಾರಿಯಾಗಿತ್ತು.
14 ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಹಾಗು ಬಿಜೆಪಿ ಬೆಂಬಲಿತ ಸದಸ್ಯರು ತಲಾ 7 ಜನರಿದ್ದರು. ಅದರಲ್ಲಿ ಮೊದಲಿಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಹಾದೇವ ಮೋಪಗಾರ ಅವರಿಗೆ 7 ಮತಗಳು ಬಂದು, 6 ಮತ ಬಿಜೆಪಿ ಬೆಂಬಲಿತ ಮಹಾಂತೇಶ ಮಾಳಗೌಡರಿಗೆ ಒಲಿದು 1 ಅಸಿಂಧು ಮತವಾಗಲು ಕಾರಣವಾಯಿತು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಶೈಲ ಸಂತಿ ಹಾಗು ಗಂಗಯ್ಯ ಮಠಪತಿ ವಿರುದ್ಧ ಸಮಬಲ ಸಾಧಿಸುವಲ್ಲಿ ಕಾರಣವಾಗಿ ಕೊನೆಗೆ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ಶ್ರೀಶೈಲ ಸಂತಿ ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

Previous articleಪೊಲೀಸ್ ಸಿಬ್ಬಂದಿಯ ಮೇಲೆಯೇ ನೈತಿಕ ಪೊಲೀಸ್ ಗಿರಿ ಆರೋಪ ಇಬ್ಬರ ಬಂಧನ
Next articleಖಾಸಗಿ ಬಸ್‌ ಪಲ್ಟಿ: ಪ್ರಯಾಣಿಕರು ಪಾರು