ಬೆಂಗಳೂರು: ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 27 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2013ರಲ್ಲಿ ಏಕದಿನ ಹಾಗೂ ಟ್ವೆಂಟಿ-20 ಮೂಲಕ ಕ್ರಿಕೆಟ್ಗೆ ಪಾದರ್ಪಣೆ ಮಾಡಿದರು. ಸ್ಮೃತಿಯವರು ಜುಲೈ ೧೮, ೧೯೯೬ರಂದು ಮುಂಬೈಯಲ್ಲಿ ಸ್ಮಿತಾ ಹಾಗು ಶ್ರೀನಿವಾಸ ದಂಪತಿಗೆ ಜನಿಸಿದರು. ಇವರ ತಂದೆ ಶ್ರೀನಿವಾಸ ಹಾಗು ಸಹೋದರ ಶ್ರವಣ್ ಇಬ್ಬರೂ ಸಾಂಗಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರರು. ಇವರ ಸಹೋದರ, ಶ್ರವಣ್ ಮಹಾರಾಷ್ಟ್ರದ ೧೬ರ ವಯೋಮಿತಿ ತಂಡದಲ್ಲಿ ಆಟವಾಡಿದ್ದು ಇವರಿಗೆ ಪ್ರೇರಣೆ ಆಯಿತು. ಇವರು ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೫ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಹಾಗೆಯೇ ತಮ್ಮ ೧೧ನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೯ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಸ್ಮೃತಿಯವರಿಗೆ ತಮ್ಮ ಕುಟುಂಬದಿಂದ ಸಾಕಷ್ಟು ಬೆಂಬಲ ಸಿಕ್ಕಿತು.

ಏಪ್ರಿಲ್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಮಂದಾನಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ವುಮೆನ್ಸ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುತ್ತಿರುವ ಇವರು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.42ರ ಸರಾಸರಿಯಲ್ಲಿ 325 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 2 ಅರ್ದ ಶತಕ ಸೇರಿವೆ. ಏಕದಿನ ಕ್ರಿಕೆಟ್ : 78 ಪಂದ್ಯಗಳನ್ನು ಆಡಿದ್ದು, 42.83ರ ಸರಾಸರಿಯಲ್ಲಿ 3084 ರನ್ನಗಳಿಸಿದ್ದಾರೆ. ಇದರಲ್ಲಿ 5 ಶತಕ, 25 ಅರ್ಧ ಶತಕ ಸೇರಿವೆ. ಟಿ20ಯಲ್ಲಿ 119 ಪಂದ್ಯಗಳನ್ನು ಆಡಿದ್ದು, 27.44 ಸರಾಸರಿಯಲ್ಲಿ 2854 ರನ್ನಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಸೇರಿವೆ. ಇವರು ಜಗತ್ತಿನಾದ್ಯಂತ ಅಭಿಮಾನಿಗಳು ಹೊಂದಿದ್ದಾರೆ.