ಕಾಂಗ್ರೆಸ್‌ನದು ಸುಳ್ಳು, ಉಗ್ರಗಾಮಿಗಳ ಕಾರ್ಖಾನೆ

0
39
ಸಿದ್ದು ಸವದಿ

ಜನರ ದಾರಿ ತಪ್ಪಿಸುವ ಕುತಂತ್ರ ರಾಜಕೀಯ ಮೊದಲು ಕಾಂಗ್ರೆಸ್ ಬಿಡಬೇಕಿದೆ. ನೇಕಾರರಿಗಾಗಿ ಒಂದೇ ಒಂದು ಕೆಲಸ ಮಾಡಿರುವುದನ್ನು ಕಾಂಗ್ರೆಸ್‌ನವರು ತೋರಿಸಲಿ ಎಂದು ಕೆಎಚ್‌ಡಿಸಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಸವಾಲು ಹಾಕಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಮಶೆವ್ವದೇವರ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬರೀ ಸುಳ್ಳು ಹಾಗೂ ಉಗ್ರಗಾಮಿಗಳನ್ನು ಸಾಕುವ ಮೂಲಕ ಕಾರ್ಖಾನೆಯಂತಾಗಿದೆ. ಇವೆಲ್ಲವನ್ನು ಬಿಟ್ಟು ಸನ್ಮಾರ್ಗದಲ್ಲಿ ಮುನ್ನಡೆದಿದ್ದಾರೆ ಜನರು ಕೊಂಚ ವಿಶ್ವಾಸವಿಡುತ್ತಾರೆ. ಅದನ್ನು ಬಿಟ್ಟು ದೇಶದ್ರೋಹ ಕೆಲಸ ಯಾರೂ ಒಪ್ಪುವುದಿಲ್ಲವೆಂದು ಸವದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನೇಕಾರರಿಗೆ ವಿದ್ಯುತ್ ಕನಿಷ್ಠ ಬಿಲ್‌ನ ಮೇಲೆ ಶೇ.50 ರಷ್ಟು ರಿಯಾಯ್ತಿಯೊಂದಿಗೆ ಶೂನ್ಯ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿದ್ದು ಬಿಜೆಪಿ ಅವಧಿಯಲ್ಲಿ ಇವೆಲ್ಲದಕ್ಕೂ ನಾವೇ ಕಾರಣವೆಂದು ಹೇಳುವುದು ಸರಿಯಲ್ಲವೆಂದರು. ನೇಕಾರರಿಗೆಂದೇ ರಾಜ್ಯ ಸರ್ಕಾರವು ನೇಕಾರ ಸಮ್ಮಾನ ಯೋಜನೆಯನ್ನು ಜಾರಿಗೆ ತಂದಿದೆ. ಇದು ಬರೀ ಸುಳ್ಳು ಎಂದು ಹೇಳುತ್ತಿರುವ ಕಾಂಗ್ರೆಸ್‌ಗೆ ಇದೀಗ ಮುಖಭಂಗವಾಗಿದೆ.
ರಾಜ್ಯದ 1.03 ಲಕ್ಷ ನೇಕಾರರಿಗೆ ಪ್ರಸಕ್ತ ವರ್ಷ ತಲಾ 5 ಸಾವಿರ ರೂ.ಗಳಷ್ಟು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿವೆ. ಈಗಾಗಲೇ ಶೇ.90 ರಷ್ಟು ನೇಕಾರರಿಗೆ ಈ ಯೋಜನೆ ಪ್ರಾಮಾಣಿಕವಾಗಿ ತಲುಪಿದೆ. ಇನ್ನೂ ಕೆಲ ನೇಕಾರರು ಆಧಾರ್ ಲಿಂಕ್‌ನ್ನು ಬ್ಯಾಂಕ್‌ಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡದ ಕಾರಣ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅವರೂ ಕೂಡ ಖಾತೆ ಚಾಲ್ತಿಯಲ್ಲಿಟ್ಟು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸವದಿ ತಿಳಿಸಿದರು.

Previous articleಭಾರತ ಜೋಡೊ ಸಮಾರೋಪಕ್ಕೆ ದೇವೇಗೌಡರು ಹೋಗಲ್ಲ
Next articleಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸರ್ಕಾರದಿಂದ ಮುಚ್ಚಿ ಹಾಕುವ ಪ್ರಯತ್ನ: ಎಚ್‌ಡಿಕೆ ಆರೋಪ