ಕರುನಾಡ ಗಂಧದ ಅಂಬಾರಿ ಕೊಟ್ಟು ಪಿಎಂ ಸನ್ಮಾನಿಸಿದ ಸಿಎಂ

0
11

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿ ಮಾಡಿದ್ದಾರೆ. ಅಕ್ಟೋಬರ್ 15 ಕ್ಕೆ ಉದ್ಘಾಟನೆ ಆಗಲಿರುವ ಮೈಸೂರು ದಸರಾ ಹಬ್ಬಕ್ಕೆ ಏರ್‌ ಶೋ ನಡೆಸಲು ಅವರು ಮನವಿ ಮಾಡಿ ಅಧಿಕೃತವಾದ ಮನವಿ ಪತ್ರವನ್ನೂ ಅವರು ರಾಜನಾಥ್ ಸಿಂಗ್ ಅವರಿಗೆ ನೀಡಿದ್ದಾರೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ಸೆಪ್ಟಂಬರ್ 24 ರವರೆಗೆ ನಡೆಯಲಿರುವ ದಸರಾ ಹಬ್ಬದಲ್ಲಿ ಭಾಗಿಯಾದಲು ದೇಶ ವಿದೇಶದ ಜನರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಏರ್ ಶೋ ನಡೆಸಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸೌಹಾರ್ದಯುತ ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿಗೆ ಗಂಧದ ಅಂಬಾರಿಯನ್ನು ಉಡುಗೊರೆಯಾಗಿ ನೀಡಿದರು.

Previous articleಮನೋಬಲಗಳು ಜೀವನದಲ್ಲಿ ತುಂಬಾ ಮುಖ್ಯ
Next articleಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ