ಕಪ್ಪು ಹಣ ಇದ್ದ ಕಾಂಗ್ರೆಸ್ಸಿಗರಿಗೆ ನೋಟು ರದ್ಧತಿಯಿಂದ ಸಮಸ್ಯೆ

0
13
pralhad joshi

ಗದಗ: ಕಪ್ಪು ಹಣ ಹೊಂದಿದ್ದ ಕಾಂಗ್ರೆಸ್ ಪಕ್ಷದ ನಾಯಕರು ನೋಟು ಅಮಾನ್ಯೀಕರಣದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂಗೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯ ನೋಟ್ ಬ್ಯಾನ್ ವಿಷಯದಲ್ಲಿ ಕೇಂದ್ರ ಸರಕಾರದ ಪರವಾಗಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರಕ್ಕೆ, ಆರ್‌ಬಿಐಗೆ ನೋಟ್‌ಬ್ಯಾನ್ ಮಾಡುವ ಅಧಿಕಾರವಿದೆ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ. ಅಪಾರ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿದ್ದ ಕಾಂಗ್ರೆಸ್ ನಾಯಕರಿಗೆ ನೋಟ್ ಬ್ಯಾನ್‌ನಿಂದ ಸಮಸ್ಯೆಯಾಗಿದ್ದರಿಂದಲೇ ನ್ಯಾಯಾಲಯದ ಮೊರೆ ಹೋಗಿದ್ದರೆಂದು ಆರೋಪಿಸಿದರು.

Previous articleಪ್ರಾದೇಶಿಕ ಪಕ್ಷಗಳು ಪ್ರಭಾವ ಬೀರಲ್ಲ: ಸಚಿವ ರಾಮುಲು
Next articleಎರಡೇ ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣ: ಕಾಂಗ್ರೆಸ್ ನಾಯಕರ ವಾಗ್ದಾನ