Home ತಾಜಾ ಸುದ್ದಿ ಏಕಾಂಗಿಯಾಗಿ ಮೌನ ಪ್ರತಿಭಟನೆ ಮುಂದುವರೆಸಿದ ಮುನಿರತ್ನ

ಏಕಾಂಗಿಯಾಗಿ ಮೌನ ಪ್ರತಿಭಟನೆ ಮುಂದುವರೆಸಿದ ಮುನಿರತ್ನ

0

ಬೆಂಗಳೂರು: ಆರ್‌.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟ ಬಗ್ಗೆ ಮುನಿರತ್ನ ಅವರು ವಿಧಾನಸೌಧದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಬಿಜೆಪಿ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಲಾಗಿದ್ದ 126 ಕೋಟಿ ಅನುದಾನಕ್ಕೆ ತಡೆ ಹಿಡಿಯಲಾಗಿದೆ. ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಕೊಡಬೇಕಾಗಿದ್ದ ಅನುದಾನವನ್ನು ಕಡಿತಗೊಳಿಸಿ ಅದನ್ನು ಕಾಂಗ್ರೆಸ್‌ ಶಾಸಕರಿಗೆ ನೀಡಲಾಗುತ್ತಿದೆ ಎಂಬುವುದು ಮುನಿರತ್ನ ಆರೋಪಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಮುನಿರತ್ನ ಜೊತೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲ ಪ್ರತಿಭಟನಾನಿರತ 25ಕ್ಕೂ ಹೆಚ್ಚು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಅನುದಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೂ ಬೀಳಲು ಸಿದ್ದನಿದ್ದೇನೆ. ಮೌನ ಪ್ರತಿಭಟನೆಯ ಬಳಿಕ ನಾನು ಡಿಕೆಶಿ ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಅವರ ಕಾಲು ಹಿಡಯುತ್ತೇನೆ ಎಂದಿದ್ದಾರೆ.

https://samyuktakarnataka.in/%e0%b2%aa%e0%b2%82%e0%b2%9a%e0%b2%b0%e0%b2%be%e0%b2%9c%e0%b3%8d%e0%b2%af%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%82%e0%b2%9a-%e0%b2%aa%e0%b2%b0%e0%b3%80%e0%b2%95%e0%b3%8d/

Exit mobile version