Home ನಮ್ಮ ಜಿಲ್ಲೆ ಚಿಕ್ಕಮಗಳೂರು ದೇವರಮನೆ ಗುಡ್ಡದಲ್ಲಿ ಪ್ರವಾಸಿಗ ನಾಪತ್ತೆ

ದೇವರಮನೆ ಗುಡ್ಡದಲ್ಲಿ ಪ್ರವಾಸಿಗ ನಾಪತ್ತೆ

0

ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಓರ್ವ ಯುವಕ ಅನುಮಾನಾಸ್ಪದವಾಗಿ ಕಣ್ಮರೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡದ ಬಳಿ ನಡೆದಿದೆ.
ಬೆಳ್ತಂಗಡಿ ತಾಲೂಕು ಕೊಯ್ಯುರು ಗ್ರಾಮದ ದೀಕ್ಷಿತ್ (27) ನಾಪತ್ತೆಯಾದ ಯುವಕ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ನಾಲ್ಕು ಪ್ರವಾಸಿ ಯುವಕರು ಪ್ರವಾಸಿತಾಣವಾದ ದೇವರಮನೆ ಪ್ರವಾಸಕ್ಕೆ ಬಂದಿದ್ದರು, ನಂತರ ಅಲ್ಲಿಂದ ಪ್ರವಾಸ ಮುಗಿಸಿ ವಾಪಸ್ ಬರುವಾಗ ನಾಲ್ಕು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ.
ಸ್ನೇಹಿತರೊಂದಿಗೆ ಗುಡ್ಡೆತೋಟದ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡು ದೀಕ್ಷಿತ್, ಮಾತಿನ ಚಕಮಕಿ ಬಳಿಕ ಸಿಟ್ಟು ಮಾಡಿಕೊಂಡು ಕಾರು ಹತ್ತದೆ ಹೊರಟುಹೋಗಿದ್ದಾನೆ. ಅಲ್ಲಿಂದ ಹೊರಟುಹೋದ ದೀಕ್ಷಿತ್ ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದಾನೆ. ಈ ಯುವಕನಿಗಾಗಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದು, ದೀಕ್ಷಿತ್ ನಿಗೂಢ ನಾಪತ್ತೆ ಹಲವಾರು ಅನುಮಾನನ್ನು ಹುಟ್ಟುಹಾಕುತ್ತಿದ್ದೆ. ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣವು ದಾಖಲಾಗಿದೆ.

Exit mobile version