Home ಕ್ರೀಡೆ ಎರಡನೇ ಪಂದ್ಯದಿಂದಲೂ ಹೊರಗುಳಿದ ಶುಭಮನ್ ಗಿಲ್

ಎರಡನೇ ಪಂದ್ಯದಿಂದಲೂ ಹೊರಗುಳಿದ ಶುಭಮನ್ ಗಿಲ್

0

ಬೆಂಗಳೂರು: ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರು ಎರಡನೇ ಪಂದ್ಯದಿಂದಲೂ ಬಹುತೇಕ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ 2023ರ ವಿಶ್ವಕಪ್ ಕ್ರಿಕೆಟ್‍ನ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರು ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದಲೂ ಬಹುತೇಕ ಹೊರಗುಳಿಯಲಿದ್ದಾರೆ . ಡೆಂಗ್ಯು ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಚೇತರಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ, ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದರೂ, ಅಕ್ಟೋಬರ್ 14ರಂದು ಸಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದ ತಂಡಕ್ಕೆ ಲಭ್ಯವಾಗಲಿದ್ದಾರೆ’ ಎಂದು ತಿಳಿದುಬಂದಿದೆ.

Exit mobile version