ಬೆಂಗಳೂರು: ಮಹಿಳೆಯರು ಬಸ್ ಹತ್ತಿದ ಮೇಲೆ ಟಿಕೆಟ್ ಪಡೆಯುವುದು ಕಡ್ಡಾಯ. ಜೂನ್ 11ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರೂ ಕೂಡ ಮಹಿಳೆಯರು ಟಿಕೆಟ್ ಪಡೆಯಬೇಕು.
ಹೌದು… ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ಒಂದು ಇದರಲ್ಲಿ ಎಲ್ಲರೂ ಟಿಕೆಟ್ ಪಡೆಯಲೇಬೇಕು. ಏಕೆಂದರೆ ಉಚಿತವಾಗಿ ಪ್ರಯಾಣಿಸುವ ಮಹಿಳೆ ಅಂಕಿ-ಅಂಶವನ್ನು ಲೆಕ್ಕಹಾಕಲು ಸರ್ಕಾರ ಕೆಲ ಹೊಸ ಮಾದರಿಯ ಟಿಕೆಟ್ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಹೊಸ ಮಾದರಿ ಟಿಕೆಟ್ ಬಿಡುಗಡೆ ಮಾಡಲಿವೆ. ಆದರೆ ಈ ಟಿಕೆಟ್ ಪಡೆಯಲು ಮಹಿಳೆಯರು ಹಣ ಕೊಡಬೇಕಿಲ್ಲ.
ಟಿಕೆಟ್ ಮೇಲೆ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ’ ಎಂದು ಬರೆದಿರುತ್ತಾರೆ ಮತ್ತು ಟಿಕೆಟ್ನಲ್ಲಿ ಯಾವುದೇ ಬೆಲೆ ನಮೂದಾಗಿರುವುದಿಲ್ಲ. ಆದ್ರೆ, ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿ ಹಾಕಿ ನಿರ್ವಾಹಕರು ಟಿಕೆಟ್ ನೀಡಲಿದ್ದಾರೆ.