Home ತಾಜಾ ಸುದ್ದಿ ಈದ್ ಮಿಲಾದ್ ಮೆರವಣಿಗೆ: ಡಿಜೆಗೆ ಹೆಜ್ಜೆ ಹಾಕಿದ ಯುವಕರು

ಈದ್ ಮಿಲಾದ್ ಮೆರವಣಿಗೆ: ಡಿಜೆಗೆ ಹೆಜ್ಜೆ ಹಾಕಿದ ಯುವಕರು

0

ಬಾಗಲಕೋಟೆ: ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದಾರೆ

ಬೆಳಗ್ಗೆ ೧೦ ಗಂಟೆಗೆ ಹಳೇ ಅಂಜುಮನ್ ಸಂಸ್ಥೆಯಿಂದ ಆರಂಭಗೊಂಡ ಮೆರವಣಿಗೆ ಕಿಲ್ಲಾ ಚಾವಡಿ ಕಟ್ಟಿ, ಹಳೇ ಅಂಚೆ ಕಚೇರಿ, ವಲ್ಲಭಬಾಯ್ ಚೌಕ್, ಪಂಖಾಮಸೀದಿ, ಕಪ್ಪಡ್ ಬಜಾರ್, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ, ರೈಲು ನಿಲ್ದಾಣ ರಸ್ತೆ, ಬಿಲಾಲ್ ಮಸೀದಿ, ತರಕಾರಿ ಮಾರುಕಟ್ಟೆ, ಹಳೇ ಅಂಚೆ ಕಚೇರಿ, ಪಂಖಾ ಮಸೀದಿಗೆ ಆಗಮಿಸಿ ಮುಕ್ತಾಯಗೊಳ್ಳಲಿದೆ.

ಸಂಜೆ ಪಂಖಾ ಮಸೀದಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಅವರು ಭಾಗವಹಿಸಲಿದ್ದು, ಬಿಟಿಡಿಎ ಮಾಜಿ ಅಧ್ಯಕ್ಷ ಜಾಕೀರ ಮೊಕಾಶಿ, ಡಾ.ಶಫಿವುಲ್ಲಾ ಇನಾಮದಾರ, ಸಂತೋಷ ಹಿಕ್ರಾಣಿ, ಬಂದೇನವಾಜ ರಬಕವಿ, ಅಬ್ದುಲ್ ಮಜೀದ ಅವರು ಪಾಲ್ಗೊಳ್ಳಲಿದ್ದಾರೆ.

Exit mobile version