ಧಾರವಾಡ: ಅಮೃತ ಭಾರತ ನಿಲ್ದಾಣ ಯೋಜನೆಯಡಿ ೫೦೮ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಯಲ್ಲಿ ಆಯ್ಕೆಯಾದ ಅಳ್ನಾವರ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಸುಮಾರು ೧೭ ಕೋಟಿ ರೂ.ಗಳ ವೆಚ್ಚದಲ್ಲಿ ಅಳ್ನಾವರ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಶೆಲ್ಟರ್, ವಿದ್ಯುತ್ ಅಲಂಕಾರ, ಪ್ರತ್ಯೇಕ ಪಾರ್ಕಿಂಗ್ ಸೇವೆ, ರೈಲುಗಳ ಮಾಹಿತಿಯ ಬೋರ್ಡ್ ಅಳವಡಿಕೆ, ದಿವ್ಯಾಂಗರಿಗೆ ೨ ಲಿಫ್ಟ್, ೨ ಎಸ್ ಕ್ಲೇ ಟರ್, ಫ್ಲೈಓವರ್ ಬ್ರಿಡ್ಜ್ ಸೇರಿದಂತೆ ಇತರೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ನೈರುತ್ಯ ರೈಲ್ವೇ ಮ್ಯಾನೇಜರ್ ಸಂಜೀವ ಕಿಶೋರ, ಡಿವಿಜನಲ್ ಮ್ಯಾನೇಜರ್ ಹರ್ಷ ಖಾರೆ, ಭರತಕುಮಾರ ಜೈನ್, ನಾರಾಯಣ ಮೋರೆ ಸೇರಿದಂತರ ಇತರರು ಸಾಕ್ಷಿಯಾದರು.