Home News ಶಾಲಾ ಕಟ್ಟಡದ ಮೇಲ್ಬಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ

ಶಾಲಾ ಕಟ್ಟಡದ ಮೇಲ್ಬಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ

ಮಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಹಂಚಿನ ಮೇಲ್ಬಾವಣಿ ದಿಢೀರ್ ಕುಸಿದ ಘಟನೆ ನಡೆದಿದೆ.
ಜೋರಾದ ಗಾಳಿಗೆ ಏಕಾಏಕಿ ಛಾವಣಿ ಕುಸಿದು ಬಿದ್ದ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು ಹಂಚು ಜಾರುವುದನ್ನು ತಿಳಿದು ಮಕ್ಕಳು ಹೊರಗೆ ಓಡಿದ್ದರಿಂದ ಭಾರೀ ದೊಡ್ಡ ದುರಂತ ತಪ್ಪಿದೆ. ಘಟನೆ ಮಂಗಳೂರು ಹೊರವಲಯದ ಪೇಜಾವರ ಗ್ರಾಮದ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯ ಈ ಘಟನೆ ನಡೆದಿದೆ, ಹೆಂಚು ಜಾರುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿಗಳು ತರಗತಿ ಕೊಠಡಿಯ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಈ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿಯಿದ್ದು ಸುಮಾರು ೨೭ ಮಕ್ಕಳು ಸೋಮವಾರ ಹಾಜರಾಗಿದ್ದರು. ಒಂದು ಮಗುವಿಗೆ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಕೊಡಸಲಾಗಿದೆ ಎಂದು ತಿಳಿದುಬಂದಿದೆ. ಮೇಲ್ಬಾವಣಿಯ ಒಂದು ಭಾಗ ಭಾರವಾಗಿ ಹೊರಭಾಗಕ್ಕೆ ಕುಸಿದು ಬಿದ್ದುದರಿಂದ ಹೆಚ್ಚಿನ ಅಪಾಯವಾಗುದು ತಪ್ಪಿದೆ. ಮೂರು ವರ್ಷದ ಹಿಂದೆ ಈ ಶಾಲೆಯನ್ನು ದುರಸ್ತಿ ಮಾಡಲಾಗಿತ್ತಾದರೂ ಏಕಾಏಕಿ ಕುಸಿದು ಬಿದ್ದಿರುವುದು ಆಶ್ಚರ್ಯ ಮೂಡಿಸಿದೆ.

Exit mobile version