ದರ್ಶನ್: “ದಿ ಡೆವಿಲ್” ಸಿನಿಮಾದ ಹಾಡಿನ ಬಿಡುಗಡೆ ದಿನಾಂಕ ರಿವಿಲ್

0
62

ಬೆಂಗಳೂರು: ನಟ ದರ್ಶನ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಕಾರಣ ನೋವಿನಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ಜೈಮಾತಾ ಕಂಬೈನ್ಸ್‌ ಸಂತೋಷದ ಸುದ್ದಿಯನ್ನು ನೀಡಿದೆ. ರಿಲಿಸ್‌ಗೂ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿದ್ದ ದಿ ಡೆವಿಲ್‌ ಚಿತ್ರದ ʼಇದ್ರೆ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡು ನೀರಿಕ್ಷೆಯಂತೆ ಬಿಡುಗಡೆ ಆಗಿರಲಿಲ್ಲ. ಇಂದು ಜೈಮಾತಾ ಕಂಬೈನ್ಸ್‌ ಈ ಕುರಿತಂತೆ ಅಪಡೆಟ್‌ ನೀಡಿದ್ದು ಹಾಡಿನ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದೆ.

ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್‌ ಚಿತ್ರದ ಹಾಡು ʻಇದ್ರೆ ನೆಮ್ದಿಯಾಗಿರ್ಬೇಕುʼ ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ ಬಿಡುಗಡೆಯಾಗಲಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದೆ. ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಡೆವಿಲ್ ಚಿತ್ರದ ಇದ್ರೆ ನೆಮ್ಮದಿಯಾಗ ಇರಬೇಕು ಎಂಬ ಹಾಡು ಆಗಸ್ಟ್ 15 ರಂದು ಬಿಡುಗಡೆ ಆಗುವುದಾಗಿ ಈ ಮುಂಚೆ ನಟ ದರ್ಶನ ಪೋಸ್ಟ್‌ ಮಾಡಿದ್ದರು.

ಪೋಸ್ಟ್ ಮಾಡಿದ ಕೆಲ ಗಂಟೆಯಲ್ಲೇ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿರುವದು ಡೆವಿಲ್‌ ಕ್ರೇಜ್‌ ತೋರಿಸುತ್ತಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ನಟ ದರ್ಶನ್‌ ಜೈಲುಪಾಲು ಆಗಿರುವುದರಿಂದ 15 ರಂದು ರಿಲೀಸ್‌ ಆಗ್ಬೇಕಿದ್ದ ಡೆವಿಲ್‌ ಸಿನಿಮಾದ ಇದ್ರೆ ನೆಮ್ದಿಯಾಗರ್ಬೇಕು ಎಂಬ ಹಾಡಿನ ರಿಲೀಸ್‌ ಕೂಡ ಮುಂದೂಡಲಾಗಿತ್ತು. ಇದೀಗ ಈ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.

ನಟ ದರ್ಶನ ಜೈಲಿಗೆ ಹೋಗುವ ಮೊದಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕಾರ್ಯ ಮುಗಿಸಿಕೊಂಡಿದ್ದು ಚಿತ್ರತಂಡಕ್ಕೆ ಅನುಕೂಲವಾಗಿದೆ. ಅವರ ಅನುಪಸ್ಥಿತಿಯಲ್ಲಿ ಚಿತ್ರ ತೆರೆಗೆ ಬರಲು ಯಾವುದೇ ತೊಂದರೆಯಾಗದಂತೆ ತಂಡ ಕೆಲಸ ಮಾಡುತ್ತಿದೆ. ಕನ್ನಡದ ಸೇರದಂತೆ ತಮಿಳು ಹಾಗೂ ತೆಲುಗಿನಲ್ಲಿ ಸಂಗೀತದ ಚಾಪು ಮೂಡಿಸಿ ಸದ್ದಾಗಿದ್ದ ಅಜನೀಶ್ ಲೋಕನಾಥ್ ಮತ್ತು ದರ್ಶನ್ ಕಾಂಬಿನೇಷನ್‌ನ ದಿ ಡೆವಿಲ್‌ ಮೊದಲ ಸಿನಿಮಾ ಆಗಿರುವದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಸರಿಗಮ ಮ್ಯೂಸಿಕ್ ಪಡೆದುಕೊಂಡಿದೆ.

2023 ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ನಂತರ, ನಟ ದರ್ಶನ್ ತೂಗುದೀಪ್‌ರಿಂದ ಯಾವುದೇ ಸಿನಿಮಾ ಬಂದಿಲ್ಲ ನಟ ದರ್ಶನ ಅವರಿಂದ ಸುಮಾರು 20 ತಿಂಗಳ ಬಳಿಕ ಅವರ ಸಿನಿಮಾವೊಂದರ ಹಾಡು ರಿಲೀಸ್ ಆಗುತ್ತಿದ್ದು, ದಿನಾಂಕ ಮರು ನಿಗದಿಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮತ್ತೆ ಕ್ರೇಜ್‌ ತುಂಬಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕ ಸದ್ದು ಮಾಡುತ್ತಿದೆ.

ನಟ ದರ್ಶನ್, ರಚನಾ ರೈ ಜೊತೆಗೆ ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ ಸೇರಿದಂತೆ ಅನೇಕರ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ತಾರಕ್’ ಚಿತ್ರದ ಬಳಿಕ ನಿರ್ದೇಶಕ ‘ಮಿಲನ’ ಪ್ರಕಾಶ್ ಅವರು ಪುನಃ ದರ್ಶನ್‌ಗೆ ಜೊತೆಯಾಗಿದ್ದಾರೆ. ‘ರಾಬರ್ಟ್’, ‘ಕಾಟೇರ’ ಖ್ಯಾತಿಯ ಸುಧಾಕರ್ ಎಸ್ ರಾಜ್ ಅವರು ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

Previous articleದೆಹಲಿ: ಜನರ ಸಮಸ್ಯೆ ಆಲಿಸುವಾಗ ಸಿಎಂಗೆ ಕಪಾಳಮೋಕ್ಷ!
Next articleನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ: ಕಡಿಮೆಯಾದ ಸಂಚಾರ ದಟ್ಟಣೆ

LEAVE A REPLY

Please enter your comment!
Please enter your name here