Home ನಮ್ಮ ಜಿಲ್ಲೆ ಯಾದಗಿರಿ ಡಿಕೆಶಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಜಾರ್ಜ್

ಡಿಕೆಶಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಜಾರ್ಜ್

0

ಯಾದಗಿರಿ: ಡಿ. ಕೆ. ಶಿವುಕುಮಾರ ಅವರ ಬೇಟೆಗೆ ಯಾವುದೇ ಅರ್ಥ ಕಲ್ಪಿಸಬೇಕಿಲ್ಲ ಇದೊಂದು ಆತ್ಮೀಯ ಭೇಟಿ ಆಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲಾ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.

ಯಾದಗಿರಿ ಹೆಲಿಪ್ಯಾಡ್ ನಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಡಿ. ಕೆ ಶಿವಕುಮಾರ ಅವರು ನಮ್ಮ‌ ಉಪ ಮುಖ್ಯಮಂತ್ರಿ, ನಮ್ಮ ಸಹೋದ್ಯೋಗಿ ಈ ಹಿನ್ನೆಲೆಯಲ್ಲಿ ಆಗಾಗ ಭೇಟಿ ಮಾಡುತ್ತಿರುತ್ತೇವೆ. ಇದರಲ್ಲಿ ನಾಯಕತ್ವ ಬದಲಾವಣೆ ಬೆಳವಣಿಗೆ ಚರ್ಚಿಸಿಲ್ಲ ಎಂದು ಡಿಸಿಎಂ ಡಿಕೆಶಿ ಭೇಟಿಯ ತರಹೇವಾರಿ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಎಐಸಿಸಿ ಅಧ್ಯಕ್ಷರು ಈ ಹಿಂದೆ ಯಾವುದೇ ಜವಾಬ್ದಾರಿ ನನಗೆ ಕೊಡಲಿಲ್ಲ, ಯಾರು ಯಾರಗೆ ಸಮಜಾಯಿಸುವ ಪ್ರಸಂಗವೇ ಇಲ್ಲ. ನನ್ನ, ಡಿಕೆಶಿ ಭೇಟಿಯಲ್ಲಿ ನಮ್ಮ ಸರ್ಕಾರದ ‌ವಿಚಾರವಾಗಿ ಮಾತನಾಡಿದ್ದೇವೆ ಎಂದರು.

ಬೆಂಗಳೂರು ನಗರ ಪಾಲಿಕೆ ‌ಚುನಾವಣೆ ವಿಚಾರ ಮಾತನಾಡಿದ್ದೇವೆ. ಎಐಸಿಸಿ ಯಾವುದೇ ಜವಾಬ್ದಾರಿ ನನಗೆ ಒಪ್ಪಿಸಿಲ್ಲ. ಅದರ ಜವಾಬ್ದಾರಿಯೂ ನನಗಿಲ್ಲ ಎಂದು ಹೇಳಿದರು.

ಡಿಕೆಶಿ ನಾನು 40 ವರ್ಷಗಳಿಂದ ಪರಿಚಯ ಇದ್ದೇವೆ.ಇಬ್ಬರಲ್ಲಿ ಆತ್ಮೀಯತೆ ಇದೆ. ಹಾಗಾಗಿ ನಾವು ಅವರ ಮನೆಗೆ, ಅವರು ನಮ್ಮ‌ಮನೆಗೆ ಬರುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ನಾನು ರಾಜ್ಯದ ಮುಖ್ಯಮಂತ್ರಿಗಳ ಪ್ರತಿನಿಧಿ, ಎಐಸಿಸಿ ಪ್ರತಿನಿಧಿ ಅಲ್ಲ. ನಾನು ವೈಯಕ್ತಿಕವಾಗಿ‌ಕ ಅಗಾಗ ಭೇಟಿಯಾಗುತ್ತಲೇ ಇರುವೆ. ಬಂಡಾಯ ಶಮನ ಮಾಡಲು ನೀವು ಡಿಕಶಿ ಮನೆಗೆ ತೆರಳಿದ್ದೀರಾ ಎಂಬ ಪ್ರಶ್ನೆಗೆ ಕೋಪಗೊಂಡ ಸಚಿವ ಜಾರ್ಜ್ ಬಂಡಾಯವೇ ಇಲ್ಲ, ಶಮನ ಎಲ್ಲಿಂದ ಆಗುತ್ತದೆ. ಇದು ಬಿಜೆಪಯವರ ಮಾತು ಕೇಳಿ ಬಂಡಾಯ ಎಂಬ ಗೊಂದಲದ ಪ್ರಶ್ನೆ ಕೇಳಬೇಡಿ ಎಂದರು.

ಎಲ್ಲ ಕಾಂಗ್ರೆಸ್ ಶಾಸಕರು ಒಂದೇ ಕುಟುಂಬ ಇದ್ದ ಹಾಗೇ, ಬಂಡಾಯ ಇಲ್ಲ, ಶಮನ ಇಲ್ಲ. ಡಿಕೆಶಿ ನೇರವಾಗಿ ಹೇಳಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ‌ಜತೆಯಲ್ಲಿ ಇದ್ದೇವೆ ಎಂದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ, ರಾಜ ವೇಣುಗೋಪಾಲ ನಾಯ್ಕ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version