Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿ: ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಪ್ತು ಪ್ರಕರಣ — ಸಿಐಡಿ ತನಿಖೆ

ಯಾದಗಿರಿ: ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಪ್ತು ಪ್ರಕರಣ — ಸಿಐಡಿ ತನಿಖೆ

1

ಯಾದಗಿರಿ: ರಾಜ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಿದೇಶಗಳಿಗೆ ಅಕ್ರಮವಾಗಿ ರಪ್ತು ಮಾಡುತ್ತಿರುವ ಪ್ರಕರಣದಲ್ಲಿ ಈಗ ಸಿಐಡಿ ತಂಡವೇ ನೇರವಾಗಿ ತನಿಖೆ ಕೈಗೊಂಡಿದೆ. ಗುರುಮಠಕಲ್‌ನಿಂದ ಬೆಳಕಿಗೆ ಬಂದ ಈ ಪ್ರಕರಣ ರಾಜ್ಯದ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಸರ್ಕಾರದ ಆದೇಶದ ಮೇರೆಗೆ ಸಿಐಡಿ ಅಧಿಕಾರಿಗಳು ಯಾದಗಿರಿಗೆ ಆಗಮಿಸಿದ್ದಾರೆ.

ಸಿಐಡಿ ಎಸ್ಪಿ ಶಶಾಂಕ್ ಅವರ ನೇತೃತ್ವದ ತಂಡ ಗುರುವಾರವೇ ಯಾದಗಿರಿ ತಲುಪಿ ತನಿಖೆ ಪ್ರಾರಂಭಿಸಿತು. ತಂಡದ ಸದಸ್ಯರು ಜಿಲ್ಲಾಾಧಿಕಾರಿ ಹರ್ಷಲ್ ಬೋಯರ್ ಅವರ ಕಚೇರಿಗೆ ಭೇಟಿ ನೀಡಿ, ಪ್ರಕರಣದ ಪ್ರಾಥಮಿಕ ಮಾಹಿತಿ ಕಲೆ ಹಾಕಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಅಧಿಕಾರಿಗಳು ಪ್ರಕರಣದ ಹಿನ್ನಲೆ, ದಾಳಿ ವೇಳೆ ಪತ್ತೆಯಾದ ದಾಖಲೆಗಳು ಮತ್ತು ಅಕ್ಕಿಯ ಮೂಲ ಪೂರೈಕೆ ಕುರಿತು ಸವಿಸ್ತಾರ ಮಾಹಿತಿ ಸಂಗ್ರಹಿಸಿದರು.

ಕಳೆದ ತಿಂಗಳು ಗುರುಮಠಕಲ್‌ನ ಎರಡು ರೈಸ್ ಮಿಲ್‌ಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಿಚಾರ ಸಾರ್ವಜನಿಕವಾಗಿ ಬಯಲಾಗುತ್ತಿದ್ದಂತೆಯೇ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.

ಪ್ರಸ್ತುತ ಸಿಐಡಿ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಇಂದು ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ. ಅಕ್ಕಿ ರಪ್ತು ಜಾಲದ ಹಿನ್ನಲೆ ಮತ್ತು ಅದರಲ್ಲಿ ಭಾಗಿಯಾಗಿರುವವರ ಗುರುತಿನ ಬಗ್ಗೆ ಕೂಡಾ ತನಿಖೆ ತೀವ್ರಗೊಳಿಸಲಾಗಿದೆ. ಇಂದು ಸ್ಥಳ ಮಹಜರು ನಡೆಯುವ ಸಾಧ್ಯತೆ. ಈ ಪ್ರಕರಣ ರಾಜ್ಯದ ಅಕ್ಕಿ ವಿತರಣೆ ವ್ಯವಸ್ಥೆಯ ಭದ್ರತೆ ಮತ್ತು ಅಕ್ರಮ ರಫ್ತು ಜಾಲದ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.

1 COMMENT

  1. ಕಲ್ಬುರ್ಗಿ ಜೀಲ್ಲೆಯ ಕಾಂಗ್ರೆಸ್ ನೇತಾರರು ಈ ಪ್ರಕರಣದ ಬಗ್ಗೆ ಏಕೆ ಏನೂ ಹೇಳಿಲ್ಲ. ಬಾಯಿಬಡುಕ ಮರಿ ಖರ್ಗೆ ಏನು ಹೇಳ್ತಾರೆ.

LEAVE A REPLY

Please enter your comment!
Please enter your name here

Exit mobile version