Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿ: ಫೋನ್ ಪೇ ಮೂಲಕ ಲಂಚ, ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್

ಯಾದಗಿರಿ: ಫೋನ್ ಪೇ ಮೂಲಕ ಲಂಚ, ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್

0

ಯಾದಗಿರಿ: ಆಸ್ತಿಗೆ ಸಂಬಂಧಿಸಿದಂತೆ ಇ-ಖಾತಾ ದಾಖಲೆ ನೀಡಲು ಹಣದ ಬೇಡಿಕೆ ಇಟ್ಟು ಪೋನ್ ಪೇ ಮೂಲಕ ರೂ. 5 ಸಾವಿರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ.

ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಎಂಬಾತ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು 8000 ರೂ. ಹಣದ ಬೇಡಿಕೆ ಇಟ್ಟಿದ್ದ. ದೂರದಾರರಿಂದ ಮುಂಗಡವಾಗಿ ರೂ. 5000 ಹಣವನ್ನು ಫೋನ್ ಪೇ ಮೂಲಕ ಪಡೆದಿರುವುದು ಖಚಿತವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಗರಸಭೆಯಲ್ಲಿ ನೌಕರ ನರಸಪ್ಪನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಹಣದ ಬೇಡಿಕೆ ಇಟ್ಟಿರುವ ಕುರಿತು ದೂರುದಾರ ಶಶಿಕುಮಾರ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದಾನೆ. ದೂರನ್ನಾಧರಿಸಿ ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಐಗಳಾದ ಸಂಗಮೇಶ, ಸಿದ್ದರಾಮ ಬಳೂರ್ಗಿ ಸೇರಿದಂತೆ ಸಿಬ್ಬಂದಿ ಕಾರ್ಯಚರಣೆ ನಡೆಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version