Home ನಮ್ಮ ಜಿಲ್ಲೆ ನಿಂಬೆ ನಂತರ ಮತ್ತೊಂದು ಹಣ್ಣಿಗೆ ಜಿಐ ಟ್ಯಾಗ್ ಪಡೆಯಲು ಸಜ್ಜಾದ ವಿಜಯಪುರ

ನಿಂಬೆ ನಂತರ ಮತ್ತೊಂದು ಹಣ್ಣಿಗೆ ಜಿಐ ಟ್ಯಾಗ್ ಪಡೆಯಲು ಸಜ್ಜಾದ ವಿಜಯಪುರ

0

ವಿಜಯಪುರ: ಜಿಲ್ಲೆಯ ನಿಂಬೆಹಣ್ಣಿಗೆ ಭೌಗೋಳಿಕ ಸ್ಥಾನಮಾನ ದೊರೆತಿದ್ದು, ವಿಜಯಪುರ ನಿಂಬೆ ಗಿಡಗಳಿಗೆ ಜಿಐ ಟ್ಯಾಗ್ ದೊರೆತಿರುವುದು ಜಿಲ್ಲೆಯ ರೈತರ ಖುಷಿಗೆ ಕಾರಣವಾಗಿತ್ತು. ಈಗ ಅದೇ ಸಾಲಿನಲ್ಲಿ ಜಿಲ್ಲೆಯ ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳಿಗೆ ಜಿಐ ಟ್ಯಾಗ್ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ಪ್ರಕಾರ ವಿಜಯಪುರ ಜಿಲ್ಲೆಯು ರಾಜ್ಯದಲ್ಲಿ ಅತಿದೊಡ್ಡ ನಿಂಬೆಹಣ್ಣು ಬೆಳೆಯುವ ಜಿಲ್ಲೆಯಾಗಿದೆ. ರಾಜ್ಯದ ಒಟ್ಟಾರೆ ನಿಂಬೆಹಣ್ಣು ಬೆಳೆಯಲ್ಲಿ ಇಂಡಿ ತಾಲೂಕ ಒಂದರಲ್ಲೇ ಶೇ 50ಕ್ಕಿಂತ ಹೆಚ್ಚು ನಿಂಬೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಂಡಿ ಪಟ್ಟಣದಲ್ಲಿ ಮೊದಲಿಗೆ ಟೀ ಪಾಯಿಂಟ್‌ ಆರಂಭಿಸಲಾಗಿತ್ತು.

ದ್ರಾಕ್ಷಿ, ಒಣದ್ರಾಕ್ಷಿಗಳಿಗೆ ಶೀಘ್ರದಲ್ಲೇ ಜಿಐ ಟ್ಯಾಗ್: ವಿಜಯಪುರ ಜಿಲ್ಲೆಯ ಇಂಡಿ ನಿಂಬೆಹಣ್ಣು ಭೌಗೋಳಿಕ ಸ್ಥಾನಮಾನ (ಜಿಐ) ಟ್ಯಾಗ್ ಪಡೆಯುವಲ್ಲಿ ಯಶಸ್ವಿಯಾದ ನಂತರ, ಈಗ ಈ ಮನ್ನಣೆಯನ್ನು ಪಡೆಯುವ ಸರದಿ ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳದ್ದಾಗಿದೆ. ವಿಜಯಪುರದ ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳಿಗೆ ಜಿಐ ಟ್ಯಾಗ್ ಪಡೆಯಲು ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿನ ದ್ರಾಕ್ಷಿ ಮತ್ತು ಒಣದ್ರಾಕ್ಷಿ ಇತರ ಪ್ರದೇಶದ ಬೆಳೆಗಳಿಗಿಂತ ಹೇಗೆ ಭಿನ್ನವಾಗಿವೆ? ಎಂಬುದನ್ನು ವೈಜ್ಞಾನಿಕವಾಗಿ ಮತ್ತು ಐತಿಹಾಸಿಕವಾಗಿ ಸ್ಥಾಪಿಸುವ ಸಮಗ್ರ ದಾಖಲೆಯನ್ನು ಸಿದ್ಧಪಡಿಸಲು ತಜ್ಞರ ತಂಡವು ಸಜ್ಜಾಗಿದೆ.

ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದೀನ್ ನೇತೃತ್ವದ 9 ಸದಸ್ಯರ ತಜ್ಞರ ತಂಡವು ಜಿಲ್ಲೆಯ ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳಿಗೆ ಜಿಐ ಟ್ಯಾಗ್ ಪಡೆಯಲು ಚೆನ್ನೈ ಮೂಲದ ಜಿಐ ರಿಜಿಸ್ಟ್ರಿಗೆ ಸಲ್ಲಿಸಲು ವಿವರವಾದ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ. ಇದು ರೈತರು ಜಾಗತಿಕ ಗುರುತನ್ನು ಪಡೆಯಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುವ ಒಂದು ಹೆಜ್ಜೆಯಾಗಿದೆ.

ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳಿಗೆ ಜಿಐ ಟ್ಯಾಗ್ ಪಡೆಯುವ ಪ್ರಕ್ರಿಯೆ ಸುಮಾರು 3-4 ತಿಂಗಳುಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಉತ್ಪನ್ನಗಳ ವಿಶಿಷ್ಟ ಗುರುತನ್ನು ಸ್ಥಾಪಿಸಲು ವೈಜ್ಞಾನಿಕ, ಐತಿಹಾಸಿಕ ಮತ್ತು ಆನುವಂಶಿಕ ದಾಖಲಾತಿಯನ್ನು ಒಳಗೊಂಡಿರುತ್ತದೆ. ಇಂತಹ ಪ್ರಯೋಗಾಲಯವು ರಫ್ತು ಮಾರ್ಗಸೂಚಿಗಳ ಪ್ರಕಾರ ಉತ್ಪನ್ನಗಳನ್ನು ಪರೀಕ್ಷಿಸಬಹುದು ಮತ್ತು ಅಗತ್ಯವಿದ್ದರೆ ರೈತರಿಗೆ ಗುಣಮಟ್ಟವನ್ನು ಸುಧಾರಿಸಲು ಮಾರ್ಗದರ್ಶನ ನೀಡುತ್ತವೆ.

ಜಿಐ ಟ್ಯಾಗ್ ಎಂದರೇನು?: ಯಾವುದೇ ಉತ್ಪನ್ನವು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದು ಅಥವಾ ಅಲ್ಲಿ ಹುಟ್ಟಿಕೊಂಡಿರುವುದು ಎಂಬುದನ್ನು ಸೂಚಿಸುವುದಕ್ಕಾಗಿ ನೀಡುವ ಗುರುತಿಗೆ (ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್) ಜಿಐ ಟ್ಯಾಗ್ ಎನ್ನುತ್ತಾರೆ. ವಸ್ತುವಿನ ನಿರ್ದಿಷ್ಟ ಗುಣಮಟ್ಟ, ಖ್ಯಾತಿ ಅಥವಾ ಇತರ ಗುಣಲಕ್ಷಣಗಳನ್ನು ಗುರುತಿಸಲು ಜಿಐ ಟ್ಯಾಗ್ ಮಾನದಂಡವಾಗಿ ಬಳಸಲಾಗುತ್ತದೆ. ಈ ಜಿಐ ಟ್ಯಾಗ್​​ಗಳು ನಿರ್ದಿಷ್ಟ ಉತ್ಪನ್ನಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒದಗಿಸುತ್ತದೆ. ಆಯಾ ಉತ್ಪನ್ನಗಳ ವಿಚಾರದಲ್ಲಿ ವಂಚನೆಯನ್ನು ತಡೆಯುವುದಕ್ಕಾಗಿ ಈ ಟ್ಯಾಗ್​​ಗಳನ್ನು ಬಳಸುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version