ಸಿಂದಗಿ: ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದನ್ನು ಆರಿಸಲು ಹೋಗಿ ರೈತನೋರ್ವ ಮೃತಪಟ್ಟಿರುವ ಘಟನೆ ಸಿಂದಗಿ ತಾಲೂಕಿನ ಬನಹಟ್ಟಿ ಪಿ.ಎ ಗ್ರಾಮದಲ್ಲಿ ನಡೆದಿದೆ.
ರೈತ ಮಲ್ಲನಗೌಡ ಬಿರಾದಾರ ಊರ್ಫ್ ಮೇಲಿನಮನಿ (67) ಎಂಬ ರೈತ ಬೆಂಕಿಯಲ್ಲಿ ಸಜೀವ ದಹನವಾಗಿರುವ ದುರ್ದೈವಿ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ: ಬನಹಟ್ಟಿ ಪಿ.ಎ ಗ್ರಾಮದ 4 ಎಕರೆ ಕಬ್ಬಿಗೆ ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ತೋಟದಲ್ಲಿ ಒಬ್ಬನೇ ಇದ್ದಿದ್ದರಿಂದ ಬೆಂಕಿ ನಂದಿಸುವ ಅವಸರದಲ್ಲಿ ರೈತ ಸೋಮನಗೌಡನಿಗೆ ಬೆಂಕಿ ಹತ್ತಿಕೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.























