ವಿಜಯನಗರ: ಹೊಸಪೇಟೆಯಲ್ಲಿ ಹೊಟೇಲ್ ಉದ್ಯಮಿಯ ಮೇಲೆ ED ದಾಳಿ

0
26

ವಿಜಯನಗರ: ಶ್ರೀನಿವಾಸ್ ರಾವ್( ಸೀನಾಬಾಬು )  ರವರ  ಪ್ರಿಯದರ್ಶನೀ ಹೋಟೆಲ್. ವಿನಾಯಕ ನಗರ ಮನೆ ಮತ್ತು  ಬಸವೇಶ್ವರ ಬಡಾವಣೆಯ ಮನೆಯ ಮೇಲೆ  ED ದಾಳಿ. ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಸೀನಬಾಬು. ಪ್ರೀಯದರ್ಶನಿ ಹೋಟೆಲ್ ನ ಲೆಕ್ಕಪತ್ರ   ವ್ಯವಹಾರದಲ್ಲಿ ವ್ಯತ್ಯಾಯ ಇರೋ ಕಾರಣ ಇಡಿ ದಾಳಿ. ಬೆಳಗ್ಗೆಯೇ ಬಂದು ದಾಳಿ ಮಾಡಿರೋ ED ಅಧಿಕಾರಿಗಳು. ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈಲ್ವೇ ನಿಲ್ದಾಣ ರಸ್ತೆಯಲ್ಲಿರೋ ಪ್ರಿಯದರ್ಶಿನಿ ಹೊಟೇಲ್

ಏಕಕಾಲಕ್ಕೆ ಮೂರು ಕಡೆ ದಾಳಿ: ಬೆಳಗ್ಗೆಯಿಂದಲೇ ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಹೊಸಪೇಟೆಯ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಪ್ರಿಯದರ್ಶಿನಿ ಹೋಟೆಲ್, ವಿನಾಯಕ ನಗರದಲ್ಲಿರುವ ಸೀನಾಬಾಬು ನಿವಾಸ ಮತ್ತು ಬಸವೇಶ್ವರ ಬಡಾವಣೆಯಲ್ಲಿರುವ ಮತ್ತೊಂದು ನಿವಾಸದ ಮೇಲೆ ED ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಪ್ರಮುಖ ದಾಖಲೆಗಳು, ಕಂಪ್ಯೂಟರ್‌ಗಳು ಮತ್ತು ಇತರೆ ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರಾ? ಸೀನಾಬಾಬು ಹಣಕಾಸಿನ ವ್ಯವಹಾರಗಳು, ಆಸ್ತಿ ವಿವರಗಳು ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಕೂಲಂಕಷವಾಗಿ ತನಿಖೆ ಯಾಗುವದೆ? ಎಂಬ ಚರ್ಚೆಗಳು ನಡೆಯುತ್ತಿವೆ.

ಅಕ್ರಮ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಸಂಪರ್ಕ: ಸೀನಾಬಾಬು ಅವರಿಗೆ ಗಣಿ ಗುತ್ತಿಗೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಳವಾದ ಬೇರುಗಳಿವೆ. ಈ ವ್ಯವಹಾರಗಳ ಮೂಲಕ ಅಪಾರ ಪ್ರಮಾಣದ ಅಕ್ರಮ ಸಂಪಾದನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಪ್ಪುಹಣವನ್ನು ಬಿಳುಪುಗೊಳಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ED ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ಕೇವಲ ಒಂದು ಹೋಟೆಲ್ ವ್ಯವಹಾರಕ್ಕೆ ಸಂಬಂಧಿಸಿದ ದಾಳಿಯಲ್ಲದೆ, ಅಕ್ರಮ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿನ ದೊಡ್ಡ ಮಟ್ಟದ ಅಕ್ರಮಗಳನ್ನು ಬಯಲಿಗೆಳೆಯುವ ಸಾಧ್ಯತೆಯಿದೆ.

Previous articleಜಲನ್ಯಾಯ- ಕಣ್ಣಾಮುಚ್ಚೆ ಕಾಡೆಗೂಡೆ
Next articleಕಾರವಾರ: ಮೀನು ಚುಚ್ಚಿ ಗಾಯಗೊಂಡಿದ್ದ ಯುವಕ: ಚಿಕಿತ್ಸೆ ಫಲಕಾರಿಯಾಗದೇ ಸಾವು

LEAVE A REPLY

Please enter your comment!
Please enter your name here