Home ನಮ್ಮ ಜಿಲ್ಲೆ ರಾಯಚೂರು ರಾಯಚೂರು: ಆಂಬ್ಯುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

ರಾಯಚೂರು: ಆಂಬ್ಯುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

0

ರಾಯಚೂರು: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗಲೇ ಶುಶ್ರೂಷಕ, ಚಾಲಕನ ಸಮಯ ಪ್ರಜ್ಞೆಯಿಂದ
ಹೆರಿಗೆ ಮಾಡಿಸಿದ ಘಟನೆ ತಾಲೂಕಿನ ಶಾಖವಾದಿ ಗ್ರಾಮದ ಸಮೀಪದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಶಾಖವಾದಿ ಗ್ರಾಮದ ಗರ್ಭಿಣಿ ಸಂಗೀತ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ವಾಹನದಲ್ಲಿ ಗರ್ಭಿಣಿ ಸಂಗೀತ ಅವರನ್ನು ರಾಯಚೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಮಾರ್ಗಮಧ್ಯೆದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

108 ಆಂಬ್ಯುಲೆನ್ಸ್ ವಾಹನದ ಶುಶ್ರೂಷಕ ಗೋವಿಂದ ಮತ್ತು ಚಾಲಕ ನರಸಣ್ಣ ಆಶಾ ವರ್ಕರ್ ಅವರ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version