ರಾಯಚೂರು: ಹಾಡುಹಗಲೇ ಪತ್ರಕರ್ತರೊಬ್ಬರ ಮನೆ ಬೀಗ ಮುರಿದು 14 ಲಕ್ಷ ನಗದು ಹಾಗೂ 95 ಗ್ರಾಂ. ಗಳಷ್ಟು ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಗುರುವಾರ ಮಧ್ಯಾಹ್ನ ಲಿಂಗಸುಗೂರು ಪಟ್ಟಣದ ಎಕ್ಸ್‌ಪರ್ಟ್ ಶಾಲೆ ಸಮೀಪದಲ್ಲಿ ನಡೆದಿದೆ.
ಪತ್ರಕರ್ತ ಸಿದ್ಧನಗೌಡ ಪಾಟೀಲ್ ಅವರು ಮನೆಯಲ್ಲಿ ಕಳ್ಳತನವಾಗಿದೆ. ಪತ್ನಿ ನಾಗಮ್ಮ ಅವರು ಶಿಕ್ಷಕಿಯಾಗಿದ್ದು, ಶಾಲೆಗೆ ತೆರಳಿದ್ದರು. ಪತ್ರಕರ್ತ ಸಿದ್ಧನಗೌಡ ಪಾಟೀಲ್ ಅವರು ಕಾರ್ಯನಿಮಿತ್ತ ಮನೆ ಬೀಗ ಹಾಕಿ ರಾಯಚೂರು ನಗರಕ್ಕೆ ಹೋಗಿದ್ದರು. ಮನೆ ಬೀಗ ಹಾಕಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಸಿದ್ಧನಗೌಡ ಅವರು ತಮ್ಮ ಜಮೀನು ಮಾರಾಟ ಮಾಡಿ ಬಂದ ಹಣವನ್ನು ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


























