ಮತದಾನದ ಗುರುತು: ಮಾರ್ಕರ್ ಪೆನ್ ಬಗ್ಗೆ ಸಂಶೋಧನೆ

0
15

ಮೈಸೂರು: ಮತದಾನದ ಗುರುತಿಗೆ ಮಾರ್ಕರ್ ಪೆನ್ ಬಳಸುವ ಬಗ್ಗೆ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಬಂದಿಲ್ಲ. ಆದರೆ, ಇದರ ಬಗ್ಗೆ ಸಂಶೋಧನೆ ನಡೆದಿದೆ ಎಂದು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ (ಮೈಲಾಕ್)ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇರ್ಫಾನ್ ತಿಳಿಸಿದ್ದಾರೆ.

‘ಮೈಲಾಕ್ 1937ರಲ್ಲಿ ಸ್ಥಾಪನೆಯಾಯಿತು. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ. ಆಗಿನಿಂದ ನಾವು ಪೇಯಿಂಟ್ಸ್ ಮಾಡಿಕೊಂಡು ಬಂದಿದ್ದೇವೆ. 1962ರಿಂದ ಇಂಕ್ ನಾವೇ ತಯಾರಿಸುತ್ತಿದ್ದೇವೆ. ಎನ್‌ಪಿಎಲ್, ಎನ್‌ಆರ್‌ಡಿಸಿ ಹಾಗೂ ಎಲೆಕ್ಷನ್ ಕಮಿಷನ್‌ನೊಂದಿಗೆ ನಮ್ಮ ಒಪ್ಪಂದವಿದೆ. ಅದರ ಪ್ರಕಾರ ಎಲ್ಲಾ ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಗಳಿಗೆ ಇಂಕ್‌ನ್ನು ಸರಬರಾಜು ಮಾಡುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೆಟಾಲಿಕ್ಸ್ ಪೇಯಿಂಟ್ಸ್ ಮಾಡುತ್ತಿದ್ದೇವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎಪಿಎಸ್‌ಆರ್‌ಟಿಸಿಯವರು ನಮ್ಮಿಂದಲೇ ತೆಗೆದುಕೊಳ್ಳುತ್ತಾರೆ. ಕೆಇಬಿ, ಹೆಸ್ಕಾಂ, ಬೆಸ್ಕಾಂನವರು ತೆಗೆದುಕೊಳ್ಳುತ್ತಾರೆ. ಇದನ್ನು ಹೊರತುಪಡಿಸಿ ನಾವು ಇದೀಗ ಡೆಕೊರೇಟಿವ್ ಪೇಯಿಂಟ್ಸ್‌ಗೂ ಪ್ರವೇಶಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಮಾರ್ಕರ್ ಪೆನ್‌ನಲ್ಲಿ ಸ್ವಲ್ಪ ಸಮಸ್ಯೆ ಇದೆ. ಡ್ರೈ ಆಗುತ್ತೆ, ಪ್ಲೋ ಸಮಸ್ಯೆ ಇದೆ. ಇದರ ಅಭಿವೃದ್ಧಿ ಆಗುತ್ತಿದೆ. ನಾವು ಹಾಗೂ ಸಿಎಸ್‌ಐಆರ್‌ನವರು ಸೇರಿ ಈ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಸ್ಯಾಂಪಲ್ಸ್ ರೆಡಿ ಆಗಿದೆ. ಎಲೆಕ್ಷನ್ ಕಮಿಷನ್ ಅನುಮತಿಯನ್ನು ಪಡೆದಿಲ್ಲ. ಒಮ್ಮೆ ಅನುಮತಿ ಸಿಕ್ಕರೆ ಮಾತ್ರ ಮಾರ್ಕರ್ ಪೆನ್‌ಗಳನ್ನು ಉತ್ಪಾದಿಸುತ್ತೇವೆ ಎಂದು ತಿಳಿಸಿದ್ದಾರೆ.

Previous articleಹೈಕಮಾಂಡ್ ಡಿಕೆಶಿ ಕಡೆಗೆ ಪಥ ಬದಲಿಸಿದೆ