ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್

0
44

ಮೈಸೂರು: ಇನ್ಫೋಸಿಸ್‌ನವರು ಏನು ಬೃಹಸ್ಪತಿಗಳಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಜಾತಿ ಗಣತಿ ಸಮೀಕ್ಷೆಗೆ ಒಪ್ಪದ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ್ ಮೂರ್ತಿ ಅವರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ. ಎಲ್ಲಾ ಜಾತಿಗಳ ಸಮೀಕ್ಷೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನು ಮಾಡುವುದು. ಇದು ಅಜ್ಞಾನವೋ ಉದ್ದೇಶ ಪೂರ್ವಕವೊ ಅವರಿಗೆ ಗೊತ್ತು ಎಂದರು.

ಮೇಲ್ಜಾತಿ ಬಡವರು ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿಲ್ಲವೆ. ಕೇವಲ ಹಿಂದುಳಿದ ವರ್ಗದವರು ಮಾತ್ರ ಪಡೆಯುತ್ತಿಲ್ಲ. ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇದು ಕೂಡ. ಎಲ್ಲಾ ಜಾತಿವರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಹೇಳಿದರು.

ಬಿಹಾರ ಚುನಾವಣೆ ಪರಿಣಾಮ ಬೀರಲ್ಲ: ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಬಿಹಾರದಲ್ಲಿ ನಮ್ಮ ಮೈತ್ರಿ ಒಕ್ಕೂಟ ಗೆಲವು ಪಡೆಯುವ ಸಾಧ್ಯತೆ ಇದೆ. ನನ್ನ ಪ್ರಚಾರದ ಅಗತ್ಯ ಇದ್ದರೆ ಹೋಗುತ್ತೇನೆ ಎಂದು ಹೇಳಿದರು.

ನವೆಂಬರ್‌ ಕ್ರಾಂತಿ ಅಲ್ಲ ಬ್ರಾಂತಿ: ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲ. ಕ್ರಾಂತಿ ಕ್ರಾಂತಿ ಎಂದು ಹೇಳುವವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಏನೇನೊ ಹೇಳುತ್ತಾರೆ. ಮಾಧ್ಯಮದವರು ಆ ಹೇಳಿಕೆಗಳಿಗೆ ಪ್ರಚಾರ ಕೊಡುವುದನ್ನ ನಿಲ್ಲಿಸಲಿ. ಆಗ ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದರು.

ಕಮೀಷನ್: ಕೋರ್ಟ್‌ಗೆ ಹೋಗಲಿ ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅದು ಸತ್ಯವಾಗಿದ್ದರೆ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಲಿ. ಇದಕ್ಕೆ ಯಾರ ಅಭ್ಯಂತರವು ಇಲ್ಲ. ಯಾರೋ ಇದನ್ನು ಗುತ್ತಿಗೆದಾರರಿಂದ ಹೇಳಿಸುತ್ತಿದ್ದಾರೆ ಎಂದು ದೂರಿದರು.

ಐಟಿ ಕಂಪನಿಗಳು ಆಂಧ್ರ ಪಾಲು: ಅಯಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಒಂದು ಕಂಪನಿ ಬೇರೆ ರಾಜ್ಯಕ್ಕೆ ಹೋದ ಕೂಡಲೇ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪು. ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಹಾಗಾದರೆ ಅವರೆಲ್ಲ ಯಾಕೆ ನಮ್ಮಲ್ಲಿ ಉಳಿದುಕೊಂಡರು. ಇದೆಲ್ಲಾ ನಮಗೆ ಗೊತ್ತಿಲ್ಲ. ಇದನ್ನ ಯಾರೋ ಸೃಷ್ಡಿ ಮಾಡುತ್ತಿರಬಹುದು ಎಂದು ಹೇಳಿದರು.

ಐದು ವರ್ಷ ಸಿಎಂ: ಇದೇ ವೇಳೆ 5 ವರ್ಷ ನಮ್ಮ ತಂದೆ ಸಿಎಂ ಆಗಿರುತ್ತಾರೆ ಎಂಬ ಪುತ್ರ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸದೆ , ಉಳಿದ ವಿಚಾರ ಅವನನ್ನೇ ಕೇಳಿಕೊಳ್ಳಿ ಎಂದಷ್ಟೆ ಹೇಳಿ ತೆರಳಿದರು.

Previous articleಕೇರಳದಲ್ಲಿ ಹಿಜಾಬ್ ವಿವಾದ: ಶಾಲೆ ಬಿಟ್ರು ಹಿಜಾಬ್ ಬಿಡಲಿಲ್ಲ!
Next articleಮತಗಳ್ಳತನ ಪ್ರಕರಣ: ಮಾಜಿ ಶಾಸಕರ ಮನೆಗಳ ಮೇಲೆ SIT ದಾಳಿ

LEAVE A REPLY

Please enter your comment!
Please enter your name here