ಕಲಬುರಗಿ: ಅನ್ನಭಾಗ್ಯ ಯೋಜನೆಯಡಿ, ಇಂದಿರಾ ಕಿಟ್‌ನಲ್ಲಿ ಎರಡು ಕೆಜಿ ತೊಗರಿ ವಿತರಣೆ, ತೊಗರಿ ಬೆಳೆಗಾರರಿಗೆ ದೊಡ್ಡ ಪ್ರಮಾಣದ ಲಾಭ. 1 ಕೋಟಿಗೂ ಹೆಚ್ಚು ಬಿಪಿಲ್ ಕಾರ್ಡ್ ಇದೆ. ತೊಗರಿ ವಿತರಣೆಯಿಂದ ಕಲಬುರಗಿ ರೈತರಿಗೆ ಲಾಭ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಲಬುರಗಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಗೂ ವರದಾನವಾಗಲಿದೆ. ಬೀದರ್, ಯಾದಗಿರಿ, ರಾಯಚೂರು, ಬಾಗಲಕೋಟ, ವಿಜಯಪುರ ಹಾಗೂ ಕಲಬುರಗಿಯಲ್ಲಿ ಬೆಳೆ ನಷ್ಟದ ಸರ್ವೇ ಕಾರ್ಯ ನಡೆದಿದೆ. ಶೇ. 70 ಸರ್ವೇ ಮುಗಿದಿದೆ. ಕಲಬುರಗಿಯಲ್ಲಿ ವಿಮೆ ಹಣ 500 ಕೋಟಿಗೂ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ. ವಾಣಿಜ್ಯ ಬೆಳೆಗಳಿಗೆ 200 ಕೋಟಿ ಬರುವ ನಿರೀಕ್ಷೆ ಇದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ರೈತರ ಪರ ಸರಕಾರ: ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರಕಾರ ಈ ಮೂಲಕ ನೆರವಿಗೆ ಬರುತ್ತಿದೆ. ಸರಕಾರ ರೈತರ ಪರ ನಿಲ್ಲುತ್ತಿದೆ. ತೊಗರಿಗೆ ಉತ್ತೇಜನ ದೊರಕಲಿದೆ. ಅನ್ನಭಾಗ್ಯದ ಮೂಲಕ ನಿರಂತರ ಕಾರ್ಯ ನಡೆಯಲಿದೆ. ಇದರಿಂದಾಗಿ ತೊಗರಿಯ ಬೆಲೆಯ ಸುಸ್ಥಿರವಾಗಿರಲಿದೆ ಎಂದರು.
ದೊಡ್ಡ ಪ್ರಮಾಣದಲ್ಲಿ ತೊಗರಿ ಖರೀದಿ: ರಾಜ್ಯಾದಾದ್ಯಂತ ತೊಗರಿ ವಿತರಣೆ. ತೊಗರಿ ನೀಡಲು ಉದ್ದೇಶ, ಪ್ರೊಟೀನ್ ಅಂಶ ಜಾಸ್ತಿ. ದೈಹಿಕವಾಗಿ ಆರೋಗ್ಯ ಸದೃಢ ಇಟ್ಟುಕೊಳ್ಳಲು ಜನರಿಗೆ ಲಾಭ. ಇನ್ನೂ, ಕೆಲ ದಿನಗಳಲ್ಲಿ ತೊಗರಿಗೆ ಟೆಂಡರ್ ಕರೆದು, ಬೆಲೆ ನಿಗದಿಪಡಿಸಿ, ವಿತರಣೆ ಮಾಡಲಾಗುವುದು ಎಂದರು. ಪ್ರತಿ ಕಾರ್ಡ್‌ಗೆ ಎರಡು ಕೆಜಿ ನೀಡಲಾಗುತ್ತಿದೆ. ಒಂದು ಕೋಟಿ ಕಾರ್ಡ್ ಹೋಲ್ಡರ್ ಇದ್ದಾರೆ. ಹೀಗಾಗಿ, ಬಹಳ ದೊಡ್ಡ ಮಟ್ಟದ ವಹಿವಾಟು ತೊಗರಿಯಲ್ಲಿ ಆಗಲಿದೆ. ದೊಡ್ಡ ಪ್ರಮಾಣದಲ್ಲಿ ತೊಗರಿ ಖರೀದಿ ಆಗಲಿದೆ ಎಂದು ಮಾಹಿತಿ ನೀಡಿದರು.
ಪಲ್ಸ ಉತ್ತೇಜನ: ನಮ್ಮ ಸರಕಾರ ಹಿಂದೇ ಇದ್ದಾಗ ಒಂದು ಕೆಜಿ ನೀಡುತ್ತಿದೆವು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ನಿಲ್ಲಿಸಲಾಗಿತ್ತು. ಈಗ ಮತ್ತೆ ಕಾಲ ಕೂಡಿ ಬಂದಿದೆ. ಮತ್ತೆ ತೊಗರಿ ವಿತರಣೆ ಮಾಡಲಾಗುತ್ತಿದೆ. ತೊಗರಿಯ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗಿದೆ. ಪಲ್ಸ ಸಂರಕ್ಷಣೆಗೆ ಕೇಂದ್ರ ಸರಕಾರಗಳು ಹಿಂದಿನಿಂದಲೂ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿವೆ. ಈಗ ಪಲ್ಸ ಉತ್ತೇಜಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಿವೆ. ಈ ವರ್ಷ 11,000 ಕೋಟಿ ಕೇಂದ್ರ ಪಲ್ಸ ಉತ್ತೇಜನಕ್ಕೆ ಮೀಸಲು ಇಟ್ಟಿದೆ.
ಹಸಿ ಬರಗಾಲ ಘೋಷಣೆ ಬಗ್ಗೆ ಮಾತನಾಡಿ, ಸರಕಾರ ರೈತರ ರಕ್ಷಣೆಗೆ ಬದ್ದವಾಗಿದೆ. ಸಿಎಂ ಸಹ ಬಂದು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಹಸಿ ಬರಗಾಲ ಘೋಷಣೆ ಎನ್ ಡಿ ಆರ್ ಎಫ್ ಕಾಯ್ದೆಯಡಿ ಘೋಷಣೆ ಮಾಡಬೇಕು. ಅದನ್ನು ಪರಿಶೀಲಿಸಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ.
ಕೇಂದ್ರ ಒಡೆದಾಳುವ ನೀತಿ: ಕೇಂದ್ರ ಸರಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ. ಕರ್ನಾಟಕದ ಮೇಲೆ ಮೋದಿ ಸರಕಾರದ ಮೇಲೆ ವಕ್ರದೃಷ್ಟಿ ಇದೆ. ನಮ್ಮ ಸರಕಾರ ಅಲ್ಲ, ಹಿಂದಿನ ಬಿಜೆಪಿ ಸರಕಾರ ಇದ್ದಾಗಲೂ ಮಲತಾಯಿ ಧೋರಣೆ ಮಾಡುತ್ತಿದೆ. 4.5 ಲಕ್ಷ ಕೋಟಿ GST ಕೊಟ್ಟರು 50% ಬರುತ್ತಿಲ್ಲ. ಇದು ಸರಿಯಾದ ಕ್ರಮವಲ್ಲ. ಎಂಪಿಗಳು ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು.
GST ಎರಿಕೆ-ಇಳಿಕೆ: ಕೇಂದ್ರ ಸರಕಾರ ಡಿಕ್ಟೇಟರ್ ಶಿಪ್ ಅಧಿಕಾರ ನಡೆಸುತ್ತಿದೆ ಹೊರತು ಪ್ರಜಾಪ್ರಭುತ್ವ ಅಲ್ಲ. ಡೆಮಾಕ್ರೆಟಿಕ್ ಬದಲು. ಆಟೋಪ್ರೆಟಿಕ್ ಸರಕಾರ ಮಾಡುತ್ತಿದ್ದಾರೆ. ತಮ್ಮ ಸಿದ್ದಂತದಂತೆ ಕೇಂದ್ರೀಕೃತ ಅಧಿಕಾರಕ್ಕೆ ಬಿಜೆಪಿ ಕೇಂದ್ರ ಸರಕಾರ ನಿಂತಿದೆ. ಇದು ದೇಶಕ್ಕೆ ಮಾರಕ. GST ಕಡಿತಗೊಳಿಸಿದ್ದೆ ಬಿಜೆಪಿ ಸರಕಾರದ ಸಾಧನೆ ಎನ್ನುವಂತೆ ತೋರಿಸುತ್ತಿದ್ದಾರೆ. ಇದು ಯಾವ ನ್ಯಾಯ. ಇಷ್ಟು ವರ್ಷ ಹೆಚ್ಚು ಮಾಡಿ, ಈಗ ಇಳಿಸಿ, ಸಂಭ್ರಮಿಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದರು.
ಬಿಹಾರ್ ಚುನಾವಣೆ ಕರ್ನಾಟಕದಿಂದ ಹಣ ಹೋಗುತ್ತಿದೆ ಎನ್ನುವ ವಿಚಾರ ಮಾತನಾಡಿ, ಬಿಹಾರದಲ್ಲಿ ಕಾಂಗ್ರೆಸ್ ಫ್ರಂಟ್ ಲೈನ್ ಪಾರ್ಟಿ ಅಲ್ಲ. ಆರ್ ಜೆ ಡಿ ಮೊದಲ ಪಾರ್ಟಿ ಆಗಿದೆ. ಅಲ್ಲಿ ಕಾಂಗ್ರೆಸ್ ಯಾಕೆ ಫೌಂಡಿಂಗ್ ಮಾಡುತ್ತೆ. ಬಿಹಾರದಲ್ಲಿ ಬಿಜೆಪಿ ಮೈತ್ರಿ ಪಕ್ಷದ ಸರಕಾರ ಇದೆ ಹಾಗಿದ್ರೆ. ಮೋದಿ ಅವರು ಬಿಹಾರಕ್ಕೆ ಹಣ ಕಳಿಸುತ್ತಿದ್ದಾರೇನು.? ಇದೆಲ್ಲವೂ ಉಹಾಪೊಹಾ ಎಂದರು.
ನವೆಂಬರ್ ಕ್ರಾಂತಿ, ಎಲ್ಲವೂ ಮಾಧ್ಯಮ ಸೃಷ್ಟಿ, ಯಾರೋ ಹೋಗುವವರಿಗೆ ಪ್ರಶ್ನೆ ಕೇಳಿದರೆ, ಅದಕ್ಕೆ ಪ್ರತಿಕ್ರಿಯೆ ನೀಡಿದ್ದರೆ, ಅದು ನವೆಂಬರ್ ಕ್ರಾಂತಿ ಆಗಲ್ಲ ಎಂದು ಹೇಳಿದರು. ಇನ್ನು ಸಚಿವ ಸಂಪುಟ ಬದಲಾವಣೆ ಸಿಎಂ ನಿರ್ಧಾರ, ಪಕ್ಷ ಹಾಗೂ ಸಿಎಂ ಯಾವ ತೀರ್ಮಾನ ಮಾಡುತ್ತಾರೋ, ಸಂಪುಟ ಬದಲಾವಣೆ ಆಗುತ್ತೆ. ಸಧ್ಯಕ್ಕೆ ಯಾವುದೇ ಮಾಹಿತಿ ಇಲ್ಲಎಂದರು. ಪ್ರತಿ ತಿಂಗಳಿಗೊಮ್ಮೆ ಸಿಎಂ ಮನೆಯಲ್ಲಿ ಔತಣಕೂಟ ಇರುತ್ತದೆ. ಇದಕ್ಕೂ ಸಂಪುಟಕ್ಕೂ ಏನು ಸಂಬಂಧ ಇಲ್ಲ ಎಂದರು.
ಶಹಾಬಾದ್ ಇ ಎಸ್ ಐ ಸಿ ಆಸ್ಪತ್ರೆ ತಾಲೂಕು ಆಸ್ಪತ್ರೆ ಮಾಡಲು ಸೂಚನೆ ನೀಡಲಾಗಿದೆ. ಕಾರ್ಮಿಕ ಇಲಾಖೆಗೆ ಕಟ್ಟಡ ಸಂಬಂಧಿಸಿರುವುದರಿಂದ ಆರೋಗ್ಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಚರ್ಚೆ ಮಾಡಿ ಅದನ್ನು ತಾಲೂಕು ಆಸ್ಪತ್ರೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ ಪಾಟೀಲ್ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಇದ್ದರು.